ರಾತ್ರಿ ಮಲಗುವ ಮುನ್ನ ನಾಲ್ಕೇ ನಾಲ್ಕು ಈ ಎಲೆಯನ್ನು ಜಗಿದು ರಸ ಕುಡಿಯಿರಿ ! ಔಷಧಿಯೇ ಇಲ್ಲದೆ ನಿಯಂತ್ರಣದಲ್ಲಿರುವುದು ಬ್ಲಡ್ ಶುಗರ್ !
ಮಧುಮೇಹವನ್ನು ನಿಯಂತ್ರಿಸುವ ನೈಸರ್ಗಿಕ ವಿಧಾನದ ಬಗ್ಗೆ ಹೇಳಲಿದ್ದೇವೆ. ಇದನ್ನು ಅಳವಡಿಸಿಕೊಂಡರೆ ಔಷಧಿಗಳಂತಹ ಯಾವುದೇ ಅಡ್ಡಪರಿಣಾಮ ಕೂಡಾ ಬೀರುವುದಿಲ್ಲ.ಆದರೆ, ಇದನ್ನು ಸೇವಿಸುವ ಸರಿಯಾದ ಕ್ರಮ ತಿಳಿದಿರಬೇಕು ಅಷ್ಟೇ.
ಆಯುರ್ವೇದ ತಜ್ಞರ ಪ್ರಕಾರ, ಮಧುಮೇಹ ರೋಗಿಗಳು ರಾತ್ರಿ ಹೊತ್ತು ಪೇರಳೆ ಎಲೆಗಳನ್ನು ಸೇವಿಸಿದರೆ ಅದು ಬ್ಲಡ್ ಶುಗರ್ ತಡೆಯುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ರಾತ್ರಿ ಮಲಗುವ ಮುನ್ನ ಪೇರಳೆ ಎಲೆಗಳನ್ನು ಜಗಿದು ಅದರ ರಸ ಕುಡಿದರೆ ಅದು ದೇಹದಲ್ಲಿ ಚೆನ್ನಾಗಿ ಕರಗುತ್ತವೆ.ಇದರಿಂದಾಗಿ ದೇಹದಲ್ಲಿ ಹೆಚ್ಚಿದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣಕ್ಕೆ ಬರುತ್ತದೆ.
ಪೇರಳೆ ಎಲೆಗಳನ್ನು ಜಗಿಯುವ ವಿಧಾನದ ಬಗ್ಗೆಯೂ ಕಾಳಜಿ ವಹಿಸುವುದು ಬಹಳ ಮುಖ್ಯ. ಚಿಕ್ಕದಾದ ಮತ್ತು ಹಸಿರು ಗಾತ್ರದ ಎಲೆಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು.ಕೇವಲ 3-4 ಎಲೆಗಳನ್ನು ಚೆನಾಗಿ ತೊಳೆದು ಅವುಗಳನ್ನು ಒಂದೊಂದಾಗಿ ಅಗಿಯುತ್ತಿರಿ.ಹೀಗೆ ಅಗಿಯುವಾಗ ಹೊರ ಬರುವ ರಸವನ್ನು ಸೇವಿಸಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.