Blood Sugar: ನಿಂಬೆ ರಸಕ್ಕೆ ಈ ಬೀಜ ಸೇರಿಸಿ ಕುಡಿದರೆ.. 45 ದಿನಗಳವರೆಗೆ ಶುಗರ್ ಕಂಪ್ಲೀಟ್ ಕಂಟ್ರೋಲ್ ಆಗುವುದು!
Diabetes Drinks: ಮಧುಮೇಹ ಇಂದಿನ ಜೀವನದಲ್ಲಿ ಎಲ್ಲರನ್ನೂ ಸಾಮಾನ್ಯ ಸಮಸ್ಯೆಯಾಗಿದೆ. ಬ್ಲಡ್ ಶುಗರ್ ನೈಸರ್ಗಿಕ ರೀತಿಯಲ್ಲಿ ಕಡಿಮೆ ಮಾಡಲು ಕೆಲವು ನೈಸರ್ಗಿಕ ಪದಾರ್ಥಗಳು ನಿಮಗೆ ಸಹಾಯ ಮಾಡಬಹುದು.
ನಿಂಬೆಯು ವಿಟಮಿನ್ ಸಿ ಹೊಂದಿದೆ. ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಸಿಟ್ರಿಕ್ ಆಸಿಡ್ ನಿಂಬೆ ಹಣ್ಣಿನಲ್ಲಿ ಕಂಡು ಬರುತ್ತದೆ. ಇದು ಸುಲಭವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.
ಚಿಯಾ ಬೀಜಗಳನ್ನು ನಿಂಬೆ ರಸದ ಜೊತೆಗೆ ಸೇವಿಸುವುದರಿಂದ ಮಧುಮೇಹಿಗಳಿಗೆ ದುಪ್ಪಟ್ಟು ಪ್ರಯೋಜನಗಳಿವೆ. ಚಿಯಾ ಬೀಜಗಳು ದೇಹದ ಚಯಾಪಚಯ ವೇಗವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಚಿಯಾ ಬೀಜ ಕೂಡ ಶುಗರ್ ಕಂಟ್ರೋಲ್ ಮಾಡುವ ಕೆಲಸ ಮಾಡುತ್ತದೆ.
ನಿಂಬೆ ರಸಕ್ಕೆ ಚಿಯಾ ಬೀಜಗಳನ್ನು ಬೆರೆಸಿ ಒಟ್ಟಿಗೆ ಸೇವಿಸುವುದರಿಂದ ಮಧುಮೇಹ ಬರುವ ಅಪಾಯ ಕಡಿಮೆ ಆಗುತ್ತದೆ. ಈಗಾಗಲೇ ಶುಗರ್ ಸಮಸ್ಯೆ ಇರುವವರಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಜೊತೆಗೆ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ.
ಮೊದಲು ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ನಿಂಬೆ ಹಣ್ಣಿನ ರಸ ಸೇರಿಸಿ. ಈಗ ಅದರಲ್ಲಿ ಮೊದಲೇ ನೆನೆಸಿಟ್ಟ ಚಿಯಾ ಬೀಜಗಳನ್ನು ಹಾಕಿ. ಸ್ವಲ್ಪ ಜೇನುತುಪ್ಪ ಬೆರೆಸಿ ಈ ನೀರನ್ನು ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯಿರಿ.
ಚಿಯಾ ಬೀಜಗಳನ್ನು ನಿಂಬೆ ನೀರಿನೊಂದಿಗೆ ಸೇವಿಸಿದರೆ ಮಲಬದ್ಧತೆ, ಗ್ಯಾಸ್, ಅಜೀರ್ಣಸಮಸ್ಯೆ ಗುಣವಾಗುತ್ತವೆ. ಚಿಯಾ ಬೀಜಗಳು ಫೈಬರ್‌ನಲ್ಲಿ ಸಮೃದ್ಧವಾಗಿವೆ. ಚಿಯಾ ಬೀಜಗಳು ದೇಹದಿಂದ ಕೊಬ್ಬನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ.
ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.