ಮಜ್ಜಿಗೆ ಜೊತೆ ಈ ಚಿಕ್ಕ ಕಾಳು ಬೆರೆಸಿ ಒಮ್ಮೆ ಕುಡಿದರೆ ಸಾಕು.. 45 ದಿನದವರೆಗೆ ಹೆಚ್ಚಾಗೋದೇ ಇಲ್ಲ ಶುಗರ್ ಲೆವಲ್!
Blood sugar remedies: ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾದಾಗ ಮಧುಮೇಹ ಕಾಯಿಲೆ ಬರುವುದು. ಸಕ್ಕರೆ ಕಾಯಿಲೆ ಇರುವವರಲ್ಲಿ ಬ್ಲಡ್ ಶುಗರ್ ಮಟ್ಟವನ್ನು ನಿಯಂತ್ರಿಸಲು ಈ ಮನೆಮದ್ದು ಬಹಳಷ್ಟು ಸಹಕಾರಿಯಾಗಿದೆ.
ಮೇದೋಜ್ಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಉತ್ಪಾದಿಸದಿದ್ದಾಗ ಸಕ್ಕರೆಯ ಮಟ್ಟ ರಕ್ತದಲ್ಲಿ ಹೆಚ್ಚಾಗುವ ಸ್ಥಿತಿಯನ್ನು ಮಧುಮೇಹ ಎಂದು ಕರೆಯುವರು. ಮಜ್ಜಿಗೆಯನ್ನು ಕುಡಿಯುವುದು ಶುಗರ್ ನಿಯಂತ್ರಣಕ್ಕೆ ಸಹಕಾರಿಯಾಗಿದೆ.
ಚೀಯಾ ಬೀಜಗಳು ಸಾಕಷ್ಟು ಫೈಬರ್ ಅಂಶವನ್ನು ಹೊಂದಿದ್ದು ಶುಗರ್ ಹೆಚ್ಚಾಗದಂತೆ ತಡೆಯುತ್ತವೆ. ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಚೀಯಾ ಬೀಜಗಳು ಸಹಾಯ ಮಾಡುತ್ತವೆ.
ಚೀಯಾ ಬೀಜಗಳನ್ನು ರಾತ್ರಿ ಮಲಗುವ ಮೊದಲು ಒಂದು ಓಟ ಮಜ್ಜಿಗೆಯಲ್ಲಿ ನೆನೆಸಿಡಬೇಕು. ಈ ಮಿಶ್ರಣವನ್ನು ಬೆಳಗೆದ್ದು ಕುಡಿಯಬೇಕು. ಇದರಿಂದ ದಿನವಿಡೀ ಬ್ಲಡ್‌ಶುಗರ್ ಏರುಪೇರಾಗುವುದಿಲ್ಲ.
ಚಿಯಾ ಬೀಜಗಳು ಮತ್ತು ಮಜ್ಜಿಗೆ ಸೇವನೆಯು ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಹೇರಳವಾದ ಫೈಬರ್ ಮತ್ತು ಪ್ರೋಟೀನ್ ಅನ್ನು ಹೊಂದಿರುವ ಕಾರಣ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಒಮೆಗಾ -3 ಕೊಬ್ಬಿನಾಮ್ಲಗಳು, ಕಬ್ಬಿಣವು ಚಿಯಾ ಬೀಜಗಳು ಮತ್ತು ಮಜ್ಜಿಗೆಯಲ್ಲಿ ಕಂಡುಬರುತ್ತದೆ. ಇದು ಹೃದಯ ಕಾಯಿಲೆಗಳ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಿಯಾ ಬೀಜಗಳು ಮತ್ತು ಮಜ್ಜಿಗೆಯನ್ನು ಕುಡಿಯಬಹುದು. ಇದು ನಿಮ್ಮ ದೇಹವನ್ನು ತಂಪಾಗಿರಿಸುತ್ತದೆ. ಇದರಲ್ಲಿ ಪುದೀನಾ ಮತ್ತು ಕಪ್ಪು ಉಪ್ಪನ್ನು ಬೆರೆಸಿ ಸೇವಿಸಿದರೆ ಮತ್ತಷ್ಟು ಪ್ರಯೋಜನಕಾರಿಯಾಗಿದೆ.
ಸಂಜೆಯ ಹೊತ್ತು ಅಥವಾ ಮಧ್ಯಾಹ್ನ ಊಟಕ್ಕೂ ಮುನ್ನ ಮಜ್ಜಿಗೆಯಲ್ಲಿ ಚಿಯಾ ಬೀಜಗಳನ್ನು ಹಾಕಿಕೊಂಡು ಕುಡಿಯಬಹುದು. ಇದರಿಂದ ಊಟದ ನಂತರ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುವುದಿಲ್ಲ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.