ಶಾಸಕ ಪ್ರದೀಪ್ ಈಶ್ವರ್ ಪತ್ನಿ ಇವರೇ… ಲಕ್ಷ ಲಕ್ಷ ಆಸ್ತಿಯ ಒಡತಿ ಎಷ್ಟೊಂದು ಮುದ್ದಾಗಿದ್ದಾರೆ ನೋಡಿ
ಈ ವರದಿಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರ ಪತ್ನಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ.
1985ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೇಸಂದ್ರ ಗ್ರಾಮದಲ್ಲಿ ಜನಿಸಿದ ಪ್ರದೀಪ್ ಈಶ್ವರ್, ಬಾಲ್ಯದಲ್ಲಿಯೇ ತಮ್ಮ ಹೆತ್ತವರನ್ನು ಕಳೆದುಕೊಂಡರು. ಆ ಬಳಿಕ ತುಮಕೂರಿನ ಸಿದ್ಧಗಂಗಾ ಮಠದ ಆಶ್ರಯದಲ್ಲಿ ಬೆಳೆದ ಅವರು, ಅಲ್ಲೇ ಶಾಲಾ ಶಿಕ್ಷಣವನ್ನು ಪೂರೈಸಿದರು.
ಕೆಲ ವರ್ಷಗಳ ಬಳಿಕ ಚಿಕ್ಕಬಳ್ಳಾಪುರಕ್ಕೆ ಮರಳಿದ ಪ್ರದೀಪ್ ಈಶ್ವರ್, ಅಲ್ಲಿನ ಮಕ್ಕಳಿಗೆ ಪಾಠ ಮಾಡಲು ಶುರು ಮಾಡಿದರು. ಕೆಲವು ಕಡೆಗಳಲ್ಲಿ ಶಿಕ್ಷಕರಾಗಿಯೂ ಕೆಲಸ ಮಾಡಿದ್ದರು. ಇದರ ಜೊತೆಗೆ ಲೋಕಲ್ ಚಾನೆಲ್ ಒಂದರಲ್ಲಿ ನಿರೂಪಕರಾಗಿ ಸೇರಿದ ಪ್ರದೀಪ್ ಈಶ್ವರ್, ‘ಲೈಫ್ ಈಸ್ ಬ್ಯೂಟಿಫುಲ್’ ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು.
ಊರಿನಲ್ಲಿಯೇ ಇದ್ದು ಶಾಲೆಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಪ್ರದೀಪ್ ಈಶ್ವರ್, 2018ರಲ್ಲಿ ಪರಿಶ್ರಮ ನೀಟ್ ಅಕಾಡೆಮಿಯನ್ನು ಸ್ಥಾಪಿಸಿದರು. ಜೀವಶಾಸ್ತ್ರ ವಿಷಯವನ್ನು ಕಲಿಸುವ ಪ್ರದೀಪ್, ಇತರ ಉಪನ್ಯಾಸಕರೊಂದಿಗೆ ಸೇರಿ ಬೆಂಗಳೂರಿನಲ್ಲಿ ಈ ನೀಟ್ ಅಕಾಡೆಮಿಯನ್ನು ನಡೆಸುತ್ತಿದ್ದಾರೆ.
ಊರಿನಲ್ಲಿಯೇ ಇದ್ದು ಶಾಲೆಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಪ್ರದೀಪ್ ಈಶ್ವರ್, 2018ರಲ್ಲಿ ಪರಿಶ್ರಮ ನೀಟ್ ಅಕಾಡೆಮಿಯನ್ನು ಸ್ಥಾಪಿಸಿದರು. ಜೀವಶಾಸ್ತ್ರ ವಿಷಯವನ್ನು ಕಲಿಸುವ ಪ್ರದೀಪ್, ಇತರ ಉಪನ್ಯಾಸಕರೊಂದಿಗೆ ಸೇರಿ ಬೆಂಗಳೂರಿನಲ್ಲಿ ಈ ನೀಟ್ ಅಕಾಡೆಮಿಯನ್ನು ನಡೆಸುತ್ತಿದ್ದಾರೆ.
ಒಬಿಸಿ ಬಲಿಜ ಸಮುದಾಯದವರಾದ ಪ್ರದೀಪ್ ಈಶ್ವರ್, 2016ರಲ್ಲಿ ದೇವನಹಳ್ಳಿ ಸಮೀಪದ ವಿಜಯಪುರವನ್ನು ತಾಲೂಕು ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಆದರೆ ಅದು ವಿಫಲವಾಯಿತು.
2018ರಲ್ಲಿ ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಧುಮುಕಿದ ಪ್ರದೀಪ್ ಈಶ್ವರ್, ವಿಧಾನಸಭಾ ಚುನಾವಣೆಯಲ್ಲಿ ಅಂದು ಶಾಸಕರಾಗಿದ್ದ ಡಾ. ಕೆ ಸುಧಾಕರ್ ಅವರ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕೆ ವಿ ನವೀನ್ ಕಿರಣ್ ಪರ ಭರ್ಜರಿ ಪ್ರಚಾರ ಮಾಡಿ ಗಮನಸೆಳೆದಿದ್ದರು.ಆದರೆ, ಸುಧಾಕರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.
ಬಳಿಕ 2023ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದ ಪ್ರದೀಪ್, ಹಿಂದಿನ ಆಡಳಿತ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಡಾ. ಸುಧಾಕರ್ ಅವರ ವಿರುದ್ಧ ಗೆದ್ದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.
ಇನ್ನು ಪ್ರದೀಪ್ ಈಶ್ವರ್ ಅವರ ಮಡದಿಯ ಹೆಸರು ಎಂ.ನಯನಾ. ಚುನಾವಣಾ ಆಯೋಗಕ್ಕೆ ಅವರು ಸಲ್ಲಿಸಿದ ಅಫಿಡವಿಟ್ ಪ್ರಕಾರ ಪ್ರದೀಪ್ ಈಶ್ವರ್ ಅವರ ವಾರ್ಷಿಕ ಆದಾಯ 34,67,770 ರೂಪಾಯಿ ಮತ್ತು ಪತ್ನಿ ನಯನಾ ಅವರ ವಾರ್ಷಿಕ ಆದಾಯ 24,50,000 ರೂಪಾಯಿ.
parishramamd@gmail.com ಇದು ಪ್ರದೀಪ್ ಈಶ್ವರ್ ಇಮೇಲ್ ಐಡಿ. ಟ್ವಿಟರ್ ಖಾತೆ @eshwar_pradeep, ಫೇಸ್‌ಬುಕ್ ಪುಟ - @pradeepeshwarnimmondige ಎಂದಿದೆ.