ಟ್ವಿಟರ್ ಗೆ ಟಕ್ಕರ್ ಕೊಡುತ್ತಿರುವ ಸ್ವದೇಶಿ Koo App ಎಷ್ಟು ಸೇಫ್?

Thu, 11 Feb 2021-5:54 pm,

ಈ ಅಪ್ಲಿಕೇಶನ್‌ನಲ್ಲಿ, ಬಳಕೆದಾರರ ಇಮೇಲ್ ಐಡಿ, ಫೋನ್ ನಂಬರ್, ಹುಟ್ಟಿದ ದಿನಾಂಕದಂತಹ ಡೇಟಾ ಇರುತ್ತದೆ. ಈ ಡೇಟಾ ಸೋರಿಕೆಯಾಗುವ ಅಪಾಯವಿದೆ ಎನ್ನಲಾಗಿದೆ. ಫ್ರೆಂಚ್ ಸೈಬರ್ ಭದ್ರತಾ ಸಂಶೋಧಕ ರಾಬರ್ಟ್ ಬ್ಯಾಪ್ಟಿಸ್ಟ್ (Robert Baptiste ) ಈ ಅಪ್ಲಿಕೇಶನ್ ಬಗ್ಗೆ ಸಂಶೋಧನೆ ನಡೆಸಿದ್ದಾರೆ. Koo App ಸುರಕ್ಷಿತವಲ್ಲ ಎಂದು ರಾಬರ್ಟ್ ತನ್ನ ಸಂಶೋಧನೆಯಲ್ಲಿಅಭಿಪ್ರಾಯಪಟ್ಟಿದ್ದಾರೆ.   

ಇದಕ್ಕೂ ಮೊದಲು, ರಾಬರ್ಟ್ ಬ್ಯಾಪ್ಟಿಸ್ಟ್ ,ಆಧಾರ್ ವ್ಯವಸ್ಥೆಯ ನ್ಯೂನತೆಗಳ ಬಗ್ಗೆಯೂ ಬಹಿರಂಗಪಡಿಸಿದ್ದರು. Koo App ಭದ್ರತೆಗೆ ಸಂಬಂಧಿಸಿದ ಅನೇಕ ನ್ಯೂನತೆಗಳನ್ನು ಹೊಂದಿದೆ ಎಂದು ರಾಬರ್ಟ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಬರ್ಟ್, 'ನಾನು ಈ ಆ್ಯಪ್‌ನ ಸಂಶೋಧನೆಗಾಗಿ 30 ನಿಮಿಷಗಳ ಸಮಯವನ್ನು ಕಳೆದಿದ್ದೇನೆ. ಈ ಅಪ್ಲಿಕೇಶನ್ ಬಳಕೆದಾರರ ವೈಯಕ್ತಿಕ ಡೇಟಾವನ್ನು ಸೋರಿಕೆ ಮಾಡುತ್ತಿದೆ. ಇವುಗಳಲ್ಲಿ ಇಮೇಲ್, ಹುಟ್ಟಿದ ದಿನಾಂಕ, ಹೆಸರು ವೈವಾಹಿಕ ಸ್ಥಿತಿ ಮತ್ತು ಲಿಂಗ ಮುಂತಾದ ಮಾಹಿತಿಗಳು ಸೇರಿವೆ ಎಂದಿದ್ದಾರೆ.

ರಾಬರ್ಟ್ ತಮ್ಮ ಟ್ವೀಟ್‌ನಲ್ಲಿ ಹಲವು ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಭಾರತದ ಸಾವಿರಾರು ಬಳಕೆದಾರರ ದತ್ತಾಂಶವು Koo App ಮೂಲಕ ಸೋರಿಕೆಯಾಗಿದೆ ಮತ್ತು ಭಾರತ ಸರ್ಕಾರದ ಕೆಲವು ಇಲಾಖೆಗಳು ಮತ್ತು ಮಂತ್ರಿಗಳ ಡೇಟಾವನ್ನು ಇದು ಒಳಗೊಂಡಿದೆ ಎಂದು ರಾಬರ್ಟ್ ಹೇಳಿದ್ದಾರೆ. Koo App ಚೀನಾದ ಕನೆಕ್ಷನ್ ಇರುವ ಸಾಧ್ಯತೆಯ ಬಗ್ಗೆಯೂ ರಾಬರ್ಟ್ ಹೇಳಿದ್ದಾರೆ. ಆದರೆ ಈ ಬಗ್ಗೆ ಸದ್ಯಕ್ಕೆ ಯಾವುದೇ ರೀತಿಯ ನಿಖರ ಮಾಹಿತಿ ಇಲ್ಲ.  Koo App  ಡೊಮೇನ್ ಚೀನಾದೊಂದಿಗೆ ಕನೆಕ್ಷನ್ ಇರುವ ಬಗ್ಗೆ ಸಂಕೇತಗಳು ಸಿಗುತ್ತಿವೆ ಎಂದು ರಾಬರ್ಟ್ ಬ್ಯಾಪ್ಟಿಸ್ಟ್ ಹೇಳಿದ್ದಾರೆ. ಈ ಡೊಮೇನ್ ಅನ್ನು ನಾಲ್ಕು ವರ್ಷಗಳ ಹಿಂದೆ ರಚಿಸಲಾಗಿದೆ. ಇದಾದ ನಂತರ ಈ ಡೊಮೆನ್ ಬಹಳಷ್ಟು ಜನರಿಗೆ ಸಿಕ್ಕಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.   

 ಇದು ಚೀನಾದ ಸಂಪರ್ಕವನ್ನು ಹೊಂದಿರಬಹುದು ಏಕೆಂದರೆ Koo App, Shunwei ಹೂಡಿಕೆಯನ್ನು ಹೊಂದಿದೆ. ಈ ಹೂಡಿಕೆ ಬಹಳ ಸಣ್ಣ ಮಟ್ಟದ್ದಾಗಿದೆ. ಆದರೂ, Shunwei  ಶಿಯೋಮಿ ಜೊತೆ ಕನೆಕ್ಟ್ ಆಗಿರುವ ಬಂಡವಾಳ ನಿಧಿಯಾಗಿದೆ. ಇದು ಸ್ಟಾರ್ಟ್ ಅಪ್‌ಗಳಲ್ಲಿ ಹೂಡಿಕೆ ಮಾಡುತ್ತದೆ. Koo App ಸಂಸ್ಥಾಪಕರು ಈ ಅಪ್ಲಿಕೇಶನ್ ಭಾರತದ ನೋಂದಾಯಿತ ಕಂಪನಿಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಇದರ ಸಂಸ್ಥಾಪಕರು ಕೂಡಾ ಭಾರತೀಯರೇ ಎಂದಿದ್ದಾರೆ.   ಟ್ವಿಟರ್‌ನಲ್ಲಿ ಕೂ ಆ್ಯಪ್‌ನ ಅಧಿಕೃತ ಖಾತೆ @kooindia ಎಂದಿದೆ ಇದೆ ಎಂದು ಸಹ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಹೇಳಿದ್ದಾರೆ. 

 ಟ್ವಿಟರ್ ಮತ್ತು ಸರ್ಕಾರದ ನಡುವಿನ 257 ಖಾತೆಗಳನ್ನು ನಿರ್ಬಂಧಿಸಿದ ನಂತರ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಭಾರತೀಯ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ Koo App  ಬಳಸುತ್ತಿದ್ದಾರೆ. ಗೋಯಲ್ ಅವರಲ್ಲದೆ, ರವಿಶಂಕರ್ ಪ್ರಸಾದ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಮತ್ತು ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಕೂಡ ಕೂ ಆಪ್ ಬಳಸುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link