ಚಿರಂಜೀವಿ ಹಾಗೂ ನಗ್ಮಾ ಮಧ್ಯೆ ಬಿಗ್ ಫೈಟ್.. ಸಿನಿಮಾ ಸೆಟ್ ಬಿಟ್ಟು ಹೊರ ಹೋದ ನಟಿ!
ಕೆಲವು ಬಾರಿ ಸಿನಿಮಾ ಶೂಟಿಂಗ್ ಸಮಯದಲ್ಲಿ ಕಾರಣಕ್ಕೆ ಹೀರೊ ಹಾಗೂ ಹೀರೊಯಿನ್ ನಡುವೆ ಕಿತ್ತಾಟ ಶುರುವಾಗುತ್ತದೆ.
ರಿಕ್ಷಾವಾಡು ಸಿನಿಮಾದ ಶೂಟಿಂಗ್ ಸೆಟ್‌ನಲ್ಲಿಯೂ ಚಿರಂಜೀವಿ ಹಾಗೂ ನಗ್ಮಾ ಜೋರಾಗಿ ಜಗಳವಾಡಿದ್ದರಂತೆ.
ನಟಿ ನಗ್ಮಾ ಸೆಟ್ ನಿಂದ ಹೊರ ಹೋಗಿದ್ದರಂತೆ. ಈ ವೇಳೆ ಕೆಲವರಿಗೆ ಕಪಾಳಮೋಕ್ಷ ಕೂಡ ಮಾಡಿದ್ದರಂತೆ ಎಂದು ಹೇಳಲಾಗುತ್ತದೆ.
1995 ರಲ್ಲಿ ರಿಕ್ಷಾವಾಡು ಸಿನಿಮಾದಲ್ಲಿ ಚಿರಂಜೀವಿ ಜೊತೆ ನಗ್ಮಾ ನಟಿಸಿದ್ದರು. ಇದೇ ಸಿನಿಮಾದಲ್ಲಿ ಸೌಂದರ್ಯಾ ಕೂಡ ನಟಿಸಿದ್ದರು.
ರಿಕ್ಷಾವಾಡು ಸಿನಿಮಾದಲ್ಲಿ ರಾಜಕೀಯ ನಾಯಕನ ಮಗಳಾಗಿ ನಗ್ಮಾ ಪಾತ್ರವಿತ್ತು. ಅಹಂಕಾರ ತುಂಬಿದ ಕ್ಯಾರೆಕ್ಟರ್ ಅನ್ನು ನಗ್ಮಾಗೆ ನೀಡಲಾಗಿತ್ತು.
ಈ ಸಿನಿಮಾದ ಹಾಡಿನ ಚಿತ್ರೀಕರಣ ನಡೆಯುತ್ತಿದ್ದಾಗ ನಗ್ಮಾ ಮತ್ತು ಚಿರಂಜೀವಿ ಜಗಳವಾಡಿದ್ದರಂತೆ ಎನ್ನಲಾಗುತ್ತದೆ.
ಸಿನಿಮಾ ಸೆಟ್ಟಿನಿಂದಲೇ ಕೋಪಿಸಿಕೊಂಡು ಹೊರಗೆ ಹೋಗಿದ್ದರಂತೆ. ಆ ಬಳಿಕ ಚಿರಂಜೀವಿ ಇವರನ್ನು ಸಮಾಧಾನ ಪಡಿಸಿ, ವಾಪಸ್ ಕರೆತಂದಿದ್ದರಂತೆ ಎನ್ನಲಾಗುತ್ತದೆ.
ಸದ್ಯ ಸಿನಿಮಾಗಳಿಂದ ದೂರ ಉಳಿದಿರುವ ನಗ್ಮಾ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇತ್ತ ಚಿರಂಜೀವಿ ಈಗಲು ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.