Health Tips: ಕೊಲೆಸ್ಟ್ರಾಲ್ & ಅಧಿಕ ಬಿಪಿ ಭಯವೇ? ಇಂದಿನಿಂದಲೇ ಈ ಹರ್ಬಲ್ ಟೀ ಸೇವಿಸಿ
ಭಾರತದಲ್ಲಿ ಅನೇಕ ಜನರು ಎಣ್ಣೆಯುಕ್ತ ಮತ್ತು ಜಂಕ್ ಫುಡ್ ತಿನ್ನಲು ಇಷ್ಟಪಡುತ್ತಾರೆ. ಇದರಿಂದ ನಮ್ಮ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಇದರಿಂದ ಹೃದಯಾಘಾತ, ಮಧುಮೇಹ, ಪರಿಧಮನಿಯ ಅಪಧಮನಿ ಕಾಯಿಲೆ, ಹೃದಯ ವೈಫಲ್ಯ ಮತ್ತು ಟ್ರಿಪಲ್ ನಾಳದ ಕಾಯಿಲೆ ಅಪಾಯವುಂಟಾಗುತ್ತದೆ. ಹೀಗಾಗಿ ಸಾವಿನ ಅಪಾಯ ತಪ್ಪಿಸಲು ನಾವು ಏನು ಮಾಡಬೇಕೆಂದು ತಿಳಿಯಿರಿ.
ಆಹಾರ ತಜ್ಞರ ಪ್ರಕಾರ, ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡ ತಪ್ಪಿಸಲು ಲಿಂಬೆರಸ ಮತ್ತು ಗಿಡಮೂಲಿಕೆ ಚಹಾವನ್ನು ಕುಡಿಯಬೇಕಂತೆ.
ಲೆಮನ್ ಗ್ರಾಸ್ ಅಥವಾ ನಿಂಬೆ ಹುಲ್ಲು ತುಂಬಾ ಪರಿಮಳಯುಕ್ತ ಮತ್ತು ಪೌಷ್ಟಿಕ ಸಸ್ಯವಾಗಿದೆ. ಇದರಲ್ಲಿ ಪೋಷಕಾಂಶಗಳ ಕೊರತೆಯಿಲ್ಲ. ವಿಟಮಿನ್ A, ತಾಮ್ರ, ಸತು, ಫೋಲಿಕ್ ಆಮ್ಲ, ಆಂಟಿ ಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇದರಲ್ಲಿ ಕಂಡುಬರುತ್ತವೆ.
ಕೊಲೆಸ್ಟ್ರಾಲ್, ಬಿಪಿ, ಕಿಡ್ನಿ ರೋಗಗಳು ಈ ರೋಗಗಳಿಗೆ ಲೆಮನ್ ಗ್ರಾಸ್ ರಾಮಬಾಣ. ಖಿನ್ನತೆ, ನಿದ್ರೆಯ ಕೊರತೆ, ಸ್ಥೂಲಕಾಯತೆ, ಅಸ್ತಮಾ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಂದ ರಕ್ಷಣೆ ಪಡೆಯಬೇಕಾದರೆ ಲೆಮನ್ ಗ್ರಾಸ್ ಉತ್ತಮ ಆಯ್ಕೆಯಾಗಿದೆ. ಹೀಗಾಗಿ ನೀವು ಪ್ರತಿದಿನ ಈ ನಿಂಬೆ ಹುಲ್ಲಿನಿಂದ ತಯಾರಿಸಿದ ಹರ್ಬಲ್ ಟೀ ಸೇವಿಸಬೇಕು. ಕೆಲವೇ ದಿನಗಳಲ್ಲಿ ಇದರ ಪ್ರಯೋಜನ ನಿಮ್ಮ ದೇಹದಲ್ಲಿ ಗೋಚರಿಸುತ್ತದೆ.
ಲೆಮನ್ ಗ್ರಾಸ್ ಚಹಾವನ್ನು ತಯಾರಿಸಲು ಮೊದಲಿಗೆ 1 ಚಮಚ ಸಣ್ಣದಾಗಿ ಕೊಚ್ಚಿದ ನಿಂಬೆ ಹುಲ್ಲು ತೆಗೆದುಕೊಂಡು ಅದನ್ನು 1 ಕಪ್ ನೀರಿನಲ್ಲಿ ಬೆರೆಸಿ 10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು. ಇದಕ್ಕೆ ರುಚಿ ಹೆಚ್ಚಿಸಲು ನೀವು ಶುಂಠಿಯನ್ನು ಸಹ ಬೆರೆಸಬಹುದು. ಇದನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಕುಡಿಯಬಹುದು.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದು ಮತ್ತು ಸಾಮಾನ್ಯ ಜ್ಞಾನ ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)