ಅಡುಗೆ ಮನೆಯಲ್ಲಿಯೇ ಇರುವ ಈ ಮೂರು ವಸ್ತುಗಳು ಮಲಬದ್ದತೆಯಿಂದ ನೀಡುತ್ತದೆ ಪರಿಹಾರ

Tue, 05 Jul 2022-4:33 pm,

ನಿಮ್ಮ ದೇಹದಲ್ಲಿ ಕೊಳಕು ಸಂಗ್ರಹವಾಗಲು ಪ್ರಾರಂಭಿಸಿದಾಗ, ಅದನ್ನು ದೇಹದಿಂದ ಹೊರ ಹಾಕಲು  ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿರುತ್ತದೆ. ದೇಹದಲ್ಲಿನ ಇಂತಹ ಸಮಸ್ಯೆಗಳಿಗೆ ಕಾರಣವೆಂದರೆ ದೇಹದಲ್ಲಿ ಕೊಳಕು ಸಂಗ್ರಹವಾಗುತ್ತದೆ. 

ಚಕ್ಕೆ ಮತ್ತು ಜೇನುತುಪ್ಪ ಎರಡೂ ತಮ್ಮ ನಿರ್ವಿಶೀಕರಣ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಈ ಎರಡರಿಂದ ಮಾಡಿದ ಪಾನೀಯವನ್ನು ಸೇವಿಸಿದರೆ ಬೆಳಿಗ್ಗೆ ಹೊಟ್ಟೆ ಶುಚಿಗೊಳಿಸಲು ಸಾಧ್ಯವಾಗುತ್ತದೆ. ದಾಲ್ಚಿನ್ನಿ ಆಂಟಿಬ್ಯಾಕ್ಟೀರಿಯಲ್, ಆಂಟಿವೈರಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ನಮ್ಮ ದೇಹದ ಕರುಳಿನಲ್ಲಿ ಅಡಗಿರುವ ಕೊಳೆಯನ್ನು ಹೊರಹಾಕುವ ಕೆಲಸ ಮಾಡುತ್ತದೆ. ಇದಲ್ಲದೆ, ಜೇನುತುಪ್ಪವು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಸೇವಿಸಿದರೆ, ನಿಮ್ಮ ಹೊಟ್ಟೆಯು ಬೇಗನೆ ಸ್ವಚ್ಛಗೊಳ್ಳುತ್ತದೆ. 

ಬೆಳಿಗ್ಗೆ ಹೊಟ್ಟೆಯನ್ನು ಸ್ವಚ್ಛಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ  ಖಾಲಿ ಹೊಟ್ಟೆಯಲ್ಲಿ ಪುದೀನಾ ಮತ್ತು ಸೌತೆಕಾಯಿಯಿಂದ ಮಾಡಿದ ಪಾನೀಯವನ್ನು ಸೇವಿಸಬೇಕು. ಇದುಕರುಳಿನ ಚಲನೆಯನ್ನು ಸರಳಗೊಳಿಸುತ್ತದೆ. ಸೌತೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಇರುತ್ತದೆ.  ಪುದೀನ ಎಲೆಗಳು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿ-ವೈರಲ್ ಗುಣಲಕ್ಷಣಗಳನ್ನು ಹೊಂದಿವೆ. ಇದು ನಿಮ್ಮ ಹೊಟ್ಟೆಯನ್ನು ಸ್ವಚ್ಛಗೊಳಿಸಲು ಸಹಾಯ  ಮಾಡುತ್ತದೆ.

ಬೆಳಗ್ಗೆ ಮಲವಿಸರ್ಜನೆ ಮಾಡಲು ಸಾಧ್ಯವಾಗದವರು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಮೊಸರಿನಲ್ಲಿ ಇಸಬ್ಗೋಲ್ ಬೆರೆಸಿ ಸೇವಿಸಬೇಕು. ಈ ವಿಧಾನವು ನಿಮ್ಮ ಹೊಟ್ಟೆಯನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ ಮುಕ್ತವಾಗಿ ಮಲವಿಸರ್ಜನೆ ಮಾಡಲು ಸಹ ಸಹಾಯ ಮಾಡುತ್ತದೆ. ಮೊಸರು ಪ್ರೋಬಯಾಟಿಕ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link