ಬೆಳಗೆದ್ದು ಈ ಮಸಾಲೆ ಬೆರೆಸಿದ ನೀರು ಕುಡಿಯಿರಿ ಸಾಕು.. ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಎಂದಿಗೂ ಹೆಚ್ಚಾಗುವುದಿಲ್ಲ.!
ಪ್ರತಿದಿನ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು.
ತಜ್ಞರ ಪ್ರಕಾರ, ಕೆಲವು ರೀತಿಯ ಪಾನೀಯಗಳು ಸಕ್ಕರೆಯ ಮಟ್ಟವನ್ನು ಹೆಚ್ಚಾಗಲು ಎಂದಿಗೂ ಕಾರಣವಾಗುವುದಿಲ್ಲ.
ಮಧುಮೇಹದಿಂದ ಬಳಲುತ್ತಿರುವವರು ಮೆಂತ್ಯ ಕಾಳು ನೆನೆಸಿದ ನೀರನ್ನು ಸೇವಿಸಬೇಕು. ಇದರಲ್ಲಿ ಕರಗುವ ನಾರಿನಂಶ ಹೇರಳವಾಗಿದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಹೀರಿಕೊಳ್ಳುತ್ತದೆ.
ದಾಲ್ಚಿನ್ನಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅರ್ಧದಷ್ಟು ಕಡಿಮೆ ಮಾಡುವ ಪರಿಣಾಮವನ್ನು ಹೊಂದಿದೆ.
ಬೆಳಿಗ್ಗೆ ದಾಲ್ಚಿನ್ನಿ ಚಹಾ ಸೇವಿಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ದಾಲ್ಚಿನ್ನಿ ಗ್ಲೂಕೋಸ್ ಹೆಚ್ಚಾಗದಂತೆ ತಡೆಯುತ್ತದೆ.
ದಾಲ್ಚಿನ್ನಿ ನೈಸರ್ಗಿಕ ಇನ್ಸುಲಿನ್ ನಂತೆ ಕಾರ್ಯನಿರ್ವಹಿಸುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗದಂತೆ ತಡೆಯುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.