ಮೊಸರಿನಲ್ಲಿ ಈ ಮಸಾಲೆ ಬೆರೆಸಿ ತಿಂದರೆ ಮಧುಮೇಹವಷ್ಟೇ ಅಲ್ಲ ಮಹಿಳೆಯರಿಗೆ ಈ ಸಮಸ್ಯೆಗಳಿಂದಲೂ ಸಿಗುತ್ತೆ ಮುಕ್ತಿ
ಮೊಸರು ಪ್ರೋಬಯಾಟಿಕ್‌ಗಳಲ್ಲಿ ಸಮೃದ್ಧವಾಗಿದ್ದು ಜೀರ್ಣಕ್ರಿಯೆಗೆ ಸಹಾಯಕ ಮತ್ತು ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಆಗಿದೆ.
ಭಾರತೀಯ ಪ್ರಸಿದ್ದ ಮಸಾಲೆಗಳಲ್ಲಿ ಒಂದಾದ ಚಕ್ಕೆ/ದಾಲ್ಚಿನ್ನಿ ಆಂಟಿ ಆಕ್ಸಿಡೆಂಟ್, ಆಂಟಿ ಬಯೋಟೆಕ್ ಮತ್ತು ಆಂಟಿ ಇನ್ಫ್ಲಮೇಟರಿ ಗುಣಲಕ್ಷಣಗಳನ್ನು ಹೊಂದಿದೆ.
ಮೊಸರು ಮತ್ತು ದಾಲ್ಚಿನ್ನಿಯನ್ನು ಒಟ್ಟಿಗೆ ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಅದರಲ್ಲೂ ಮಹಿಳೆಯರ ಆರೋಗ್ಯಕ್ಕೆ ಇವನ್ನು ವರದಾನ ಎಂತಲೇ ಪರಿಗಣಿಸಲಾಗಿದೆ.
ದಾಲ್ಚಿನ್ನಿ ಪುಡಿಯನ್ನು ಮೊಸರಿನಲ್ಲಿ ಬೆರೆಸಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಂಟ್ರೋಲ್ ಆಗುತ್ತದೆ. ಜೊತೆಗೆ ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ.
ದಾಲ್ಚಿನ್ನಿಯನ್ನು ಪುಡಿ ಮಾಡಿ ಇದನ್ನು ಮೊಸರಿನಲ್ಲಿ ಬೆರೆಸಿ ದಿನ ಯಾವುದೇ ಹೊತ್ತಿನಲ್ಲಿ ದಿನಕ್ಕೆ ಒಮ್ಮೆ ಸೇವಿಸುವುದರಿಂದ ಮಹಿಳೆಯರು ಹಲವು ಪ್ರಯೋಜನಗಳನ್ನು ಪಡೆಯುತ್ತಾರೆ.
ಪಿಸಿಓಎಸ್- ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್, ಪಿಸಿಓಡಿ ಸಮಸ್ಯೆ ಹೊಂದಿರುವ ಮಹಿಳೆಯರಿಗೆ ದಾಲ್ಚಿನ್ನಿ ಮತ್ತು ಮೊಸರು ವರದಾನಕ್ಕಿಂತ ಕಡಿಮೆ ಇಲ್ಲ.
ಮೊಸರಿನಲ್ಲಿ ದಾಲ್ಚಿನ್ನಿ ಪುಡಿ ಬೆರೆಸಿ ಸವಿಯುವುದರಿಂದ ಇದರಲ್ಲಿರುವ ಉರಿಯೂತದ ಗುಣಲಕ್ಷಣಗಳು ಹಾರ್ಮೋನ್ ಅಸಮತೋಲನವನ್ನು ನಿರ್ವಹಿಸಿ ಋತುಚಕ್ರದ ಸಮಸ್ಯೆಯನ್ನು ನಿವಾರಿಸುತ್ತದೆ.
ನಿಯಮಿತವಾಗಿ ಮೊಸರು-ದಾಲ್ಚಿನ್ನಿ ತಿನ್ನುವುದರಿಂದ ಒತ್ತಡ ನಿವಾರಣೆಯಾಗಿ ಮನಸ್ಸು ಶಾಂತಗೊಳುತ್ತದೆ.
ದಾಲ್ಚಿನ್ನಿ ಮತ್ತು ಮೊಸರಿನ ಬಳಕೆಯು ಮಹಿಳೆಯರಿಗೆ ಒಟ್ಟಾರೆ ಆರೋಗ್ಯಕ್ಕೆ ಉತ್ತಮ ಕೊಡುಗೆ ನೀಡುತ್ತದೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡಕ್ಕೂ ತುಂಬಾ ಪ್ರಯೋಜನಕಾರಿ ಆಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.