ಸ್ವಚ್ಛತೆಗೆ ಹೆಸರುವಾಸಿ ದೇಶದ ಈ ರೈಲು ನಿಲ್ದಾಣಗಳು: ಮನಗೆಲ್ಲುವ ಫೋಟೋಗಳು ಇಲ್ಲಿವೆ ನೋಡಿ

Tue, 02 Aug 2022-8:33 am,

ಪಿಂಕ್ ಸಿಟಿ ಎಂದು ಜನಪ್ರಿಯವಾಗಿರುವ ಜೈಪುರ ನಗರದ ಜೈಪುರ ಜಂಕ್ಷನ್ ರೈಲು ನಿಲ್ದಾಣ ಸ್ವಚ್ಛವಾಗಿದೆ. 88 ಬ್ರಾಡ್ ಗೇಜ್ ಮತ್ತು 22 ಮೀಟರ್ ಗೇಜ್ ರೈಲುಗಳು ಒಂದು ದಿನದಲ್ಲಿ ತಮ್ಮ ಗಮ್ಯಸ್ಥಾನಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ರಾಜಸ್ಥಾನದ ಏಕೈಕ ನಿಲ್ದಾಣವೆಂದರೆ ಅದು ಜೈಪುರ. ಈ ರೈಲು ನಿಲ್ದಾಣವು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಇಲ್ಲಿನ ಸ್ವಚ್ಛತೆ ಮತ್ತು ಅಂದ ಎಂತವರನ್ನೂ ಮನಸೂರೆಗೊಳ್ಳುವಂತೆ ಮಾಡುತ್ತದೆ. 

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಅತಿ ದೊಡ್ಡ ರೈಲು ನಿಲ್ದಾಣ ಎಂದರೆ ಅದು ತಾವಿ. ಈ ರೈಲ್ವೇ ನಿಲ್ದಾಣವು ಭಾರತದ ಅತ್ಯಂತ ಸ್ವಚ್ಛ ರೈಲು ನಿಲ್ದಾಣಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆದಿದೆ. ಪ್ರವಾಸಿಗರು ಕಾಶ್ಮೀರ ಕಣಿವೆಗೆ ಹೋಗಲು ಈ ನಿಲ್ದಾಣವನ್ನು ಬಳಸಬೇಕು. ಇಲ್ಲಿನ ಸುಂದರ ಬಯಲು ಸೀಮೆಯಂತೆ ಜಮ್ಮು ಕಾಶ್ಮೀರದ ಈ ರೈಲು ನಿಲ್ದಾಣವೂ ಅತ್ಯಂತ ಸ್ವಚ್ಛವಾಗಿದೆ ಕಂಗೊಳಿಸುತ್ತದೆ.  

ಆಂಧ್ರಪ್ರದೇಶದ ವಿಜಯವಾಡ ರೈಲು ನಿಲ್ದಾಣವು ಸ್ವಚ್ಛತೆಯ ವಿಷಯದಲ್ಲಿ ಹಿಂದೆ ಉಳಿದಿಲ್ಲ. ವಿಜಯವಾಡದ ದೇವಾಲಯಗಳು ಬಹಳ ಪ್ರಸಿದ್ಧವಾಗಿದ್ದು, ಇಲ್ಲಿಗೆ ಭೇಟಿ ನೀಡಲು ದೂರದೂರುಗಳಿಂದ ಜನರು ಬರುತ್ತಾರೆ. ಆದರೂ ಸಹ ಇಲ್ಲಿನ ಸ್ವಚ್ಛತೆ ಕಾಪಾಡಿಕೊಂಡಿರುವುದು ಮಾತ್ರ ನಿಜಕ್ಕೂ ಸಂತಸದ ವಿಚಾರ. 

ಜೋಧ್‌ಪುರ ರೈಲು ನಿಲ್ದಾಣವು ಭಾರತದ ಅತ್ಯಂತ ಸ್ವಚ್ಛ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ಪ್ರಯಾಣಿಕರು ಇಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಪಡೆಯುತ್ತಾರೆ. ಸ್ವಚ್ಛತೆಯಿಂದ ಹಿಡಿದು ನಿರ್ವಹಣೆಯವರೆಗೂ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಲಾಗುತ್ತದೆ.

ಹರಿದ್ವಾರ ಜಂಕ್ಷನ್ ರೈಲು ನಿಲ್ದಾಣವು ಹರಿದ್ವಾರ ನಗರದ ಪ್ರಮುಖ ರೈಲು ನಿಲ್ದಾಣವಾಗಿದೆ. ಹರಿದ್ವಾರವು ಧಾರ್ಮಿಕ ಸ್ಥಳಗಳಿಗೆ ಸಾಕಷ್ಟು ಹೆಸರುವಾಸಿಯಾಗಿದೆ. ಭಾರತದ ಸ್ವಚ್ಛ ರೈಲು ನಿಲ್ದಾಣಗಳ ಪಟ್ಟಿಯಲ್ಲಿ ಹರಿದ್ವಾರ ಜಂಕ್ಷನ್ ರೈಲು ನಿಲ್ದಾಣವೂ ಸೇರಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link