ಒಂದೇ ಒಂದು ಲವಂಗದ ಮೊಗ್ಗು ಸಾಕು ಬ್ಲಡ್ ಶುಗರ್ ನಾರ್ಮಲ್ ಮಾಡಲು ! ಬಳಕೆ ಮಾಡುವ ವಿಧಾನ ಸಮಯ ಹೀಗೆ ಇದ್ದರೆ ಮಾತ್ರ !
ಮಧುಮೇಹ ಅಥವಾ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಿದ್ದಾಗ ನಿರಂತರವಾಗಿ ಔಷಧಿ ತೆಗೆದುಕೊಳ್ಳಬೇಕು.ಹಾಗಿದ್ದರೆ ಮಾತ್ರ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸಾಧ್ಯ. ಆದರೆ, ಕೆಲವೊಂದು ಮನೆ ಮದ್ದಿನ ಸಹಾಯದಿಂದಲೇ ಶುಗರ್ ಅನ್ನು ನಾರ್ಮಲ್ ಮಾಡಿಕೊಳ್ಳಬಹುದು.
ನಾವಿಲ್ಲಿ ನಿತ್ಯ ಅಡುಗೆಯಲ್ಲಿ ಬಳಸುವ ಲವಂಗದ ಬಗ್ಗೆ ಹೇಳುತ್ತಿದ್ದೇವೆ. ಲವಂಗದಲ್ಲಿ ಅನೇಕ ಔಷಧೀಯ ಗುಣಗಳಿವೆ.ಲವಂಗವನ್ನು ಅನೇಕ ರೋಗಗಳನ್ನು ಗುಣಪಡಿಸಲು ಬಳಸಲಾಗುತ್ತದೆ.ಲವಂಗ ನಂಜುನಿರೋಧಕವಾಗಿದ್ದು ಮಧುಮೇಹದ ಸಮಸ್ಯೆಯನ್ನು ನಿವಾರಿಸುತ್ತದೆ.ನೋವು ನಿವಾರಕವಾಗಿ ಅಥವಾ ಪೈನ್ ಕಿಲ್ಲರ್ ಆಗಿಯೂ ಇದನ್ನು ಬಳಸಬಹುದು.
ಲವಂಗವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಇನ್ಸುಲಿನ್ ಹೆಚ್ಚಳ ಮಾಡಲು ಸಹಾಯ ಮಾಡುತ್ತದೆ.
ಲವಂಗವು ಹೈಪೊಗ್ಲಿಸಿಮಿಕ್ ಪರಿಣಾಮವನ್ನು ಹೊಂದಿದ್ದು, ಇನ್ಸುಲಿನ್ ಸ್ರವಿಸುವಿಕೆಯನ್ನು ಮತ್ತು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಲವಂಗವನ್ನು ಹಲವಾರು ರೀತಿಯಲ್ಲಿ ಸೇವಿಸಬಹುದು.ಅದರಲ್ಲಿ ಮುಖ್ಯವಾಗಿ ರಾತ್ರಿ ಮಲಗುವ ಮುನ್ನ 2 ರಿಂದ 3 ಲವಂಗವನ್ನು ಬಾಯಿಯಲ್ಲಿ ಇಟ್ಟುಕೊಂಡರೆ ಬೆಳಗಾಗುವುದರ ಹೊತ್ತಿಗೆ ರಕ್ತದಲ್ಲಿನ ಸಕ್ಕರೆ ಮಟ್ಟ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿರುತ್ತದೆ.
ಲವಂಗದ ಪುಡಿಯನ್ನು ಸಾಂಪ್ರದಾಯಿಕವಾಗಿ ಗಾಯಗಳನ್ನು ಗುಣಪಡಿಸಲು ಕೂಡಾ ಬಳಸಲಾಗುತ್ತದೆ. ಲವಂಗವನ್ನು ಶೀತ-ಕೆಮ್ಮು ಇದ್ದಾಗ ಲವಂಗವನ್ನು ಚಹಾದ ರೂಪದಲ್ಲಿ ಬಳಸಲಾಗುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)