ರಾತ್ರಿ ಊಟದ ನಂತರ ʻಈʼ ಒಂದು ಪುಟ್ಟ ಮಸಾಲೆ ಪದಾರ್ಥವನ್ನು ಬಾಯಿಗೆ ಹಾಕಿಕೊಳ್ಳುವುದರಿಂದ, ತಕ್ಷಣ ಸಿಗುತ್ತೆ ದೀರ್ಘಕಾಲದ ಅಸಿಡಿಟಿಯಿಂದ ಮುಕ್ತಿ
Acidity: ವಯಸ್ಕರಿಂದ ವಯಸ್ಸಾದವರ ವರೆಗೂ ಎಲ್ಲರಿಗೂ ಕಾಡುವ ಸಾಮಾನ್ಯ ಸಮಸ್ಯೆ ಎಂದರೆ ಅದು ಅಸಿಡಿಟಿ ಸಮಸ್ಯೆ. ಎದೆಯಲ್ಲಿ ಉರಿ, ಹೊಟ್ಟೆ ಉಬ್ಬುವಿಕೆ ನಿಮ್ಮ ದಿನ ಚರಿಗೆ ಅಡ್ಡಿಯಾಗುವಂತೆ ಮಾಡಿಬಿಡುತ್ತದೆ.
ಅಸಿಡಿಟಿಯನ್ನು ಕಡಿಮೆಮಾಡಲು ಅಥವಾ ಹೋಗಲಾಡಿಸಲು ಜನರು ಹಲವಾರು ಔಷಧಿಗಳನ್ನು ಬಳಸುತ್ತಾರೆ.
ಯಾವುದೇ ಔಷಧಿಯನ್ನು ಬಳಸದೆ, ಅಸಿಡಿಟಿಯನ್ನು ಕಡಿಮೆ ಮಾಡಲು. ಈ ಒಂದು ಮಸಾಲೆ ಪದಾರ್ಥ ಸೇವಿಸಿದರೆ ಸಾಕು.
ಲವಂಗದಲ್ಲಿ ಯುಜೆನಾಲ್ ಎಂಬ ಸಂಯುಕ್ತವಿದೆ. ಈ ಗುಣಲಕ್ಷಣಗಳ ಕಾರಣದಿಂದಾಗಿ, ಲವಂಗವನ್ನು ತಿನ್ನುವುದು ಉರಿಯೂತದ ಮತ್ತು ಜೀರ್ಣಕಾರಿ ಪ್ರಯೋಜನಗಳನ್ನು ಒದಗಿಸುತ್ತದೆ.
ಇದರಲ್ಲಿರುವ ಯುಜೆನಾಲ್ ಎಂಬ ಸಂಯುಕ್ತವೂ ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ.
ಲವಾಂಗಾವನ್ನು ಸೇವಿಸುವುದರಿಂದ ಹೊಟ್ಟೆಯ ಉಬ್ಬುವಿಕೆ ಕಡಿಮೆಯಾಗಿ ಅಸಿಡಿಟಿಯಿಂದ ಉಂಟಾಗುವ ಉರಿಯೂತದಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಲವಂಗವನ್ನು ಬಾಯಲ್ಲಿಟ್ಟುಕೊಂಡ ದೀರ್ಘಕಾಲದವರೆಗೂ ಇದನ್ನು ಅಗಿಯುವುದರಿಂದ ಇದರಲ್ಲಿ ಪೂರ್ತಿ ರಸ ನಿಮ್ಮ ದೇಹಕ್ಕೆ ಹೋಗಿ ನಿಮ್ಮ ದೇಹವನ್ನು ರಿಲ್ಯಾಕ್ಸ್ ಮಾಡುತ್ತದೆ.
ಈ ಮನೆಮದ್ದನ್ನು ಪಾಲಿಸಿದ ನಂತರವೂ ಕೂಡ ನಿಮಗೆ ಅಸಿಡಿಟಿ ಸಮಸ್ಯೆ ಮುಂದುವರೆದರೆ, ನೀವು ಖಂಡಿತವಾಗಿಯೂ ವೈದ್ಯರನ್ನು ಭೇಟಿ ಮಾಡಲೇಬೇಕು.
ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯನ್ನು ZEE NEWS KANNADA ಖಚಿತಪಡಿಸುವುದಿಲ್ಲ. ಈ ಮಾಹಿತಿ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ.