Cloves Benefits: ಪುರುಷರ ಆರೋಗ್ಯಕ್ಕೆ ವರದಾನ ಲವಂಗ
ಪ್ರತಿ ಭಾರತೀಯ ಅಡುಗೆ ಮನೆಯಲ್ಲಿ ಬಳಸಲಾಗುವ ಪ್ರಮುಖ ಮಸಾಲ ಪದಾರ್ಥಗಳಲ್ಲಿ ಲವಂಗವೂ ಒಂದು. ಆಹಾರದ ರುಚಿ ಹೆಚ್ಚಿಸುವ ಲವಂಗ ಆರೋಗ್ಯದ ಗಣಿಯೂ ಹೌದು.
ಲವಂಗದಲ್ಲಿ ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಖನಿಜಗಳು ಹೇರಳವಾಗಿ ಕಂಡುಬರುತ್ತವೆ. ಹಾಗಾಗಿ, ಬಿಪಿ ನಿಯಂತ್ರಣಕ್ಕಾಗಿ ಇದನ್ನು ರಾಮಬಾಣ ಎಂದು ಹೇಳಲಾಗುತ್ತದೆ.
ಲವಂಗದಲ್ಲಿ ವಿಟಮಿನ್ ಸಿ, ಜಿಂಕ್ ಸೇರಿದಂತೆ ಹಲವು ಪೋಷಕಾಂಶಗಳು ಕಂಡು ಬರುತ್ತದೆ, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಪ್ರಯೋಜನಕಾರಿ ಆಗಿದೆ.
ಲವಂಗದಲ್ಲಿ ಉತ್ತಮ ಪ್ರಮಾಣದ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳೊಂದಿಗೆ ಅನೇಕ ಉತ್ಕರ್ಷಣ ನಿರೋಧಕಗಳು ಕೂಡ ಕಂಡು ಬರುತ್ತದೆ. ಹಾಗಾಗಿ, ಲವಂಗವನ್ನು ಜಗಿದು ತಿನ್ನುವುದರಿಂದ ಹಲ್ಲುನೋವಿನಿಂದ ಪರಿಹಾರ ಪಡೆಯಬಹುದು.
ಲವಂಗ ಸೇವನೆಯು ದೇಹದಲ್ಲಿ ಟೆಸ್ಟೋಸ್ಟೆರಾನ್ ಎಂಬ ಹಾರ್ಮೋನ್ ಮಟ್ಟವನ್ನು ಹೆಚ್ಚಿಸಲು ತುಂಬಾ ಪ್ರಯೋಜನಕಾರಿ. ಈ ಹಾರ್ಮೋನ್ ಪುರುಷರ ಲೈಂಗಿನ ಜೀವನವನ್ನು ಸುಧಾರಿಸುತ್ತದೆ. ಅಷ್ಟೇ ಅಲ್ಲ, ಇದು ಗುಣಮಟ್ಟದ ವೀರ್ಯಾಣು ಸಂಖ್ಯೆಯನ್ನು ಕೂಡ ಹೆಚ್ಚಿಸುತ್ತದೆ. ಇದಕ್ಕಾಗಿ, ಲವಂಗವನ್ನು ಪುಡಿಮಾಡಿ ಅದನ್ನು ಹಾಲಿನಲ್ಲಿ ಬೆರೆಸಿ ಕುಡಿಯಬೇಕು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.