blood sugar: ಈ ಪುಡಿಯನ್ನು ನೀರಿಗೆ ಹಾಕಿ ಕುಡಿಯಿರಿ... ಬ್ಲಡ್ ಶುಗರ್ ದಿನವಿಡೀ ಏನೇ ತಿಂದರೂ ಹೆಚ್ಚಾಗೋದೇ ಇಲ್ಲ!
ಲವಂಗವು ಆ್ಯಂಟಿಆಕ್ಸಿಡೆಂಟ್ ಹೊಂದಿದ್ದು, ಮಧುಮೇಹ ರೋಗಿಗಳಿಗೆ ದಿವ್ಯ ಔಷಧವಾಗಿದೆ. ಲವಂಗದಲ್ಲಿರುವ ಪೋಷಕಾಂಶಗಳು ಚಯಾಪಚಯ ಸಮಸ್ಯೆಗಳನ್ನು ಕಡಿಮೆ ಮಾಡಿ ಶುಗರ್ ನಿಯಂತ್ರಿಸುತ್ತವೆ.
ಲವಂಗ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹವನ್ನು ಅನೇಕ ರೋಗಗಳಿಂದ ದೂರವಿಡುತ್ತದೆ. ಮಧುಮೇಹಿಗಳು ಲವಂಗ ತಿನ್ನುವುದರಿಂದ ಅನೇಕ ಆರೋಗ್ಯ ಲಾಭಗಳು ಸಿಗುತ್ತವೆ.
ಫೈಬರ್, ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳು ಲವಂಗದಲ್ಲಿ ಸಮೃದ್ಧವಾಗಿವೆ. ಆರೋಗ್ಯವನ್ನು ಸುಧಾರಿಸಲು ತುಂಬಾ ಸಹಕಾರಿ. ದೇಹಕ್ಕೆ ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ.
ಲವಂಗವು ಮಧುಮೇಹಿಗಳ ದೇಹದಲ್ಲಿ ಇನ್ಸುಲಿನ್ ಉತ್ತೇಜಿಸಲು ಸಹಾಯ ಮಾಡುತ್ತದೆ. ಮಧುಮೇಹಿಗಳು ಲವಂಗವನ್ನು ಪ್ರತಿದಿನ ಸೇವಿಸಬಹುದು. ಮಧುಮೇಹ ಇರುವವರು ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸಲು ಲವಂಗವನ್ನು ತಿನ್ನಬೇಕು.
ಮಧುಮೇಹ ನಿಯಂತ್ರಣಕ್ಕೆ ಲವಂಗವನ್ನು ಜಗಿದು ತಿನ್ನಬಹುದು. ಇಲ್ಲವೇ ಒಂದು ಲೋಟ ನೀರಿಗೆ ಲವಂಗದ ಪುಡಿ ಬರೆಸಿಯೂ ಕುಡಿಯಬಹುದು.
ಲವಂಗವನ್ನು ಸೇವಿಸುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು. ದಿನಕ್ಕೆ ಕನಿಷ್ಠ 1 ರಿಂದ 2 ಲವಂಗ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಬಹುದು. ಹೊಟ್ಟೆಯ ತೊಂದರೆಗಳು, ವಾಂತಿ, ವಾಕರಿಕೆ ಮುಂತಾದ ಜೀರ್ಣಕಾರಿ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.