ಈ ಹಣ್ಣು ಮಧುಮೇಹಕ್ಕೆ ಮದ್ದು.. 30 ನಿಮಿಷದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ! ಒಂದೇ ತಿಂದರೂ ವರ್ಷವಿಡೀ ಹೆಚ್ಚಾಗಲ್ಲ ಬ್ಲಡ್ ಶುಗರ್
cluster fig benefits : ಅತ್ತಿ ಹಣ್ಣು ಬೀದಿ ಬದಿ ಬೆಳೆದ ಬೃಹದಾಕಾರದ ಮರದಲ್ಲಿ ಸಿಗುವ ಸಾಮಾನ್ಯ ಹಣ್ಣಾಗಿದೆ. ಇದು ಹಲವು ರೋಗಗಳಿಗೆ ಮನೆಮದ್ದಾಗಿದೆ.
ಅತ್ತಿ ಹಣ್ಣು ಎಲ್ಲೆಡೆ ಸಿಗುವ ಸಾಮಾನ್ಯ ಹಣ್ಣಾಗಿದ್ದು, ಮಧುಮೇಹವನ್ನು ದೂರ ಮಾಡುವ ಪವರ್ ಇದಕ್ಕಿದೆ. ಸಾಮಾನ್ಯವಾಗಿ ರಸ್ತೆ ಬದಿಯಲ್ಲಿ ಎತ್ತರದ ಅತ್ತಿ ಮರ ಬೆಳೆದಿರುವುದನ್ನು ಬಹುತೇಕರು ನೋಡಿರುತ್ತೇವೆ.
ಅತ್ತಿ ಹಣ್ಣುಗಳು ರಸ್ತೆ ಮೇಲೆಲ್ಲ ಬಿದ್ದಿರುತ್ತವೆ. ಅನೇಕರು ಇದನ್ನು ಎತ್ತಿಕೊಂಡು ಬಿಡಿಸಿ ಊದಿ ತಿನ್ನುತ್ತಾರೆ. ಈ ಪುಟಾಣಿ ಹಣ್ಣು ಆರೋಗ್ಯಕ್ಕೆ ಸಂಜೀವಿನಿಯಂತೆ. ಗೊಂಚಲಿನ ರೀತಿಯಲ್ಲಿ ಬಿಡುವ ಅತ್ತಿ ಹಣ್ಣು ಅನೇಕ ರೋಗಗಳನ್ನು ನಿವಾರಿಸುತ್ತದೆ.
ಅತ್ತಿ ಹಣ್ಣು ಸೇವನೆ ಮಾಡಿದರೆ ಮುಟ್ಟಿನ ನೋವು ಕಡಿಮೆಯಾಗುತ್ತದೆ. ಅತ್ತಿ ಹಣ್ಣು ಸಂಧಿವಾತವನ್ನು ಗುಣಪಡಿಸುತ್ತದೆ. ಅತ್ತಿ ಹಣ್ಣಿನ ರಸವನ್ನು ಗೋಧಿ ಹಿಟ್ಟಿನಲ್ಲಿ ಕಲಿಸಿ ಕೀಲು ನೋವಿರುವ ಜಾಗಕ್ಕೆ ಹಚ್ಚಿದರೆ ನೋವು ಮಾಯವಾಗುತ್ತದೆ. ಊತ ಕೂಡ ಕಡಿಮೆಯಾಗುವುದು.
ವಿಟಮಿನ್ ಬಿ 2 ಅಂಶ ಅತ್ತಿ ಹಣ್ಣಿನಲ್ಲಿ ಸಮೃದ್ಧವಾಗಿದ್ದು, ಇದರ ಸೇವನೆಯಿಂದ ಕೆಂಪು ರಕ್ತ ಕಣಗಳ ಉತ್ಪಾದನೆ ಹೆಚ್ಚುತ್ತದೆ. ಅತ್ತಿ ಹಣ್ಣು ತಿನ್ನಲು ಸ್ವಲ್ಪ ಸಿಹಿ ಮತ್ತು ಒಗರು ರುಚಿ ಹೊಂದಿರುತ್ತದೆ.
ಅತ್ತಿ ಮರದ ತೊಗಟೆಯನ್ನು ಒಣಗಿಸಿ ಪುಡಿ ಮಾಡಿ ಬಿಸಿ ನೀರಿಗೆ ಹಾಕಿ ಕುಡಿದರೆ ಬ್ಲಡ್ ಶುಗರ್ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ. ಅತ್ತಿ ಹಣ್ಣು ತಿನ್ನುವುದರಿಂದ ಮಧುಮೇಹ ಗುಣವಾಗುತ್ತದೆ. ಅತ್ತಿ ಹಣ್ಣಿನಲ್ಲಿ ಪುಟ್ಟ ಪುಟ್ಟ ಹುಳುಗಳಿರುತ್ತವೆ. ಇದೇ ಕಾರಣಕ್ಕೆ ಇದನ್ನು ಊದಿ ತಿನ್ನಬೇಕು.
ಅತ್ತಿ ಹಣ್ಣಿನ ಸೇವನೆಯಿಂದ ಕ್ಯಾನ್ಸರ್ ಬರದಂತೆ ತಡೆಯಬಹುದು. ಕಣ್ಣುಗಳ ಆರೋಗ್ಯ ಸುಧಾರಿಸುತ್ತದೆ. ದೃಷ್ಟಿ ದೋಷವನ್ನು ನಿವಾರಿಸುತ್ತದೆ. ಕಣ್ಣಿನ ಪೊರೆ ಬರದಂತೆ ತಡೆಯುತ್ತದೆ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.