ರಾತ್ರಿ ಜಿರಳೆಗಳ ಕಾಟವೇ... ಈ ಎಲೆಯನ್ನು ಅಡುಗೆಮನೆ ಸಿಂಕ್ ಬಳಿ ಇಟ್ಟರೆ ಸಾಕು.. 10 ನಿಮಿಷದಲ್ಲಿ ಸತ್ತು ಬೀಳುತ್ತವೆ ಕಾಕ್ರೋಚ್ !
ಸಾಮಾನ್ಯವಾಗಿ ಜನರು ಅಡುಗೆಮನೆಯ ಸಿಂಕ್‌ನ ಕೆಳಗೆ, ಕಪಾಟುಗಳು ಇತ್ಯಾದಿಗಳಲ್ಲಿ ಜಿರಳೆಗಳ ಬೆಳವಣಿಗೆಯ ಬಗ್ಗೆ ಚಿಂತಿತರಾಗುತ್ತಾರೆ.
ಈ ಜಿರಳೆಗಳು ಪಾತ್ರೆಗಳು, ಆಹಾರ ಪದಾರ್ಥಗಳಲ್ಲಿಯೂ ಓಡಾಡುತ್ತವೆ.
ಕೆಲವರು ಜಿರಳೆಗಳನ್ನು ಕಂಡ ತಕ್ಷಣ ಓಡಿಹೋಗುವಷ್ಟು ಭಯ ಪಡುತ್ತಾರೆ.
ಮನೆಯಲ್ಲಿ ಅಡಗಿರುವ ಜಿರಳೆಗಳನ್ನು ತೆಗೆದುಹಾಕಲು ಈ ಮನೆಮದ್ದು ಪ್ರಯೋಜನಕಾರಿಯಾಗಬಹುದು.
ಪಲಾವ್ ಎಲೆಗಳು ಜಿರಳೆಗಳನ್ನು ಓಡಿಸಲು ಪರಿಣಾಮಕಾರಿಯಾಗಬಹುದು. 4-5 ಪಲಾವ್ ಎಲೆಗಳನ್ನು ತೆಗೆದುಕೊಂಡು ಕೈಗಳಿಂದ ಪುಡಿ ಮಾಡಿ.
ಈ ಪುಡಿಯನ್ನು ಕಿಚನ್ ಕ್ಯಾಬಿನೆಟ್‌ಗಳಲ್ಲಿ ಮತ್ತು ಜಿರಳೆಗಳನ್ನು ಎಲ್ಲಿ ನೋಡಿದರೂ ಅಲ್ಲಿ ಹಾಕಿ.
ಸಿಂಕ್ ಬಳಿಯೂ ಸ್ವಲ್ಪ ಹಾಕಿ. ಪಲಾವ್ ಎಲೆಯ ವಾಸನೆಯನ್ನು ಜಿರಳೆಗಳು ಇಷ್ಟಪಡುವುದಿಲ್ಲ.
ಇದರಿಂದಾಗಿ ಅವು ಹೊರಬರುತ್ತವೆ. ಬಳಿಕ ಅವುಗಳನ್ನು ಸುಲಭವಾಗಿ ಕೊಲ್ಲಬಹುದು.