ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ..ಇದರ ರೇಟ್‌ ಎಷ್ಟು ಗೊತ್ತಾ..? ಕೇಳಿದ್ರೆ ಖಂಡಿತಾ ನೀವು ಶಾಕ್‌ ಆಗ್ತೀರಾ..!

Mon, 05 Aug 2024-1:21 pm,

ಜಿರಳೆ ಬರೋದಿರಲಿ, ಕೆಲವೊಬ್ಬರು ಜಿರಳೆಯ ಹೆಸರು ಕೇಳುತ್ತಿದ್ದಂತೆಯೇ ಕಾಲ್ಕಿತ್ತುತ್ತಾರೆ. ಇನ್ನೂ ಕೆಲವೊಬ್ಬರು ಜಿರಳೆ ಕಾಣುತ್ತಿದತೆ ಕಿರುಚಿ ಚೀರಾಡುತ್ತಾರೆ. ಜಿರಳೆಗಳು ವೈರಸು ಹರಡುತ್ತೆ ಅಂತ ಹೇಳಲಾಗುತ್ತೆ. ಆದರೆ ಜಿರಳೆಗಳಿಂದಲೂ ದುಡ್ಡು ಮಾಡಬಹುದು ಅಂತ ನಿಮಗೆ ಗೊತ್ತಾ..? ವಿಶ್ವ ಮಾರುಕಟ್ಟೆಯಲ್ಲಿ ಈ ಜಿರಳೆಗಳಿಗಂತಲೂ ಫುಲ್‌ ಡಿಮ್ಯಾಂಡ್‌.  

ಜಿರಳೆಗಳನ್ನು ಅನೇಕರು ಆಹಾರವಾಗಿ ಸೇವನೆ ಮಾಡುತ್ತಾರೆ. ಈ ಕೀಟವನ್ನು ಅನೇಕ ದೇಶಗಳಲ್ಲಿ ವ್ಯವಸಾಯಿಗಳು ಬೆಳೆಗಳನ್ನು ಬೆಳೆಸಿದಂತೆ ಬೆಳಸಲಾಗುತ್ತದೆ.ಅದರಲ್ಲಿ ಅಂತೂ ಕೀಟಗಳನ್ನು ತಮ್ಮ ದೈನಂದಿನ ಆಹಾರವಾಗಿ ಸೇವಿಸುವ ಚೀನಾ ಕೂಡ ಒಂದು. ಆಫ್ರಿಕಾದಲ್ಲಿ ಅನೇಕ ಜನರು ಜಿರಳೆಗಳನ್ನು ಆಹಾರವಾಗಿ ತಿನ್ನುತ್ತಾರೆ. ಈ ಜಿರಳೆಗಳು ಕೆಲವು ಉತ್ತಮ ಪೌಷ್ಟಿಕಾಂಶದ ಗುಣಗಳನ್ನು ಹೊಂದಿದ್ದು, ಆಫ್ರಿಕದಲ್ಲಿ 20 ಪ್ರತಿಶತ ಅಪೌಷ್ಟಿಕ ಜನರು ಈ ಜಿರಳೆಗಳ ಸೇವನೆಯಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ.   

ಚೀನಾದಲ್ಲಿ ಜಿರಳೆಗಳನ್ನು ಪ್ರಮುಖ ಆಹಾರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಅಂಕಿಅಂಶಗಳನ್ನು ನೋಡುವುದಾದರೆ  2030 ಅಷ್ಟೊತ್ತಿಗೆ, ಅನೇಕ ಜೀವಿಗಳಿಗೆ ಈ ಜಿರಳೆಳು ಆಹಾರವಾಗಿ ಜಾಗತಿಕ ಮಾರುಕಟ್ಟೆಯಲ್ಲಿ $ 8 ಬಿಲಿಯನ್ ತಲುಪಲಿದೆಯಂತೆ. 90 ಪ್ರತಿಶತದಷ್ಟು ಉಗಾಂಡಾದ ರೈತರು ಈ ಜಿರಳೆಗಳನ್ನು ಮೀನುಗಳಿಗೆ ಇವಿಗಳನ್ನು ಆಹಾರವಾಗಿ ಬಳಸುತ್ತಿದ್ದಾರೆ ಎಂದು ವರದಿಯಾಗಿದೆ.   

ಆಫ್ರಿಕಾದ ತಾಂಜಾನಿಯಾದಲ್ಲಿ ಡೇನಿಯಲ್ ರೋಹುರಾ ಎಂಬುವವರು ಈ ಜಿರಳೆಗಳನ್ನು ಬೆಳೆಸುತ್ತಾರೆ. ಇವರ ದೃಷ್ಟಿಯಲ್ಲಿ ಜಿರಳೆ ಚಿನ್ನದಷ್ಟೇ ಅಮೂಲ್ಯ. ಪ್ರತಿ ಕೆಜಿಗೆ ಜಿರಳೆಗಳನ್ನು ಈ ಯುವಕ 5 ಯುರೋಗಳಿಗೆ ಮಾರಾಟ ಮಾಡುತ್ತಾರೆ.   

ಚೀನಾದಲ್ಲಿ ಜಿರಳೆಳು ಕೇವಲ ಔಷಧಿ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಿಲ್ಲ . ಪ್ರೊಟೀನ್‌ನಿಂದ ಸಮೃದ್ಧವಾಗಿರುವ ಈ ಜಿರಳೆಗಳು ಕೆಲವು ಚೈನೀಸ್ ರೆಸ್ಟೋರೆಂಟ್‌ಗಳಲ್ಲಿ ವಿಶೇಷ ಆಹಾರವಾಗಿಯೂ ಸವಿಯುತ್ತಾರೆ. ವಿಶ್ವದಲ್ಲಿನ ಅತಿದೊಡ್ಡ ಜಿರಳೆ ಉತ್ಪಾದನಾ ಘಟಕ ಚೀನಾದ ಕ್ಸಿಚಾಂಗ್‌ನಲ್ಲಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link