ಬಿಳಿಕೂದಲನ್ನು 10 ನಿಮಿಷದಲ್ಲಿ ನೈಸರ್ಗಿಕವಾಗಿ ಕಪ್ಪಾಗಿಸುತ್ತೆ ತೆಂಗಿನ ನಾರು! ಈ ಎಣ್ಣೆಯಲ್ಲಿ ಮಿಶ್ರಣ ಮಾಡಿ ಹಚ್ಚಿದರೆ ಪರ್ಮನೆಂಟ್ ಸೊಲ್ಯೂಷನ್!
ಬಿಳಿ ಕೂದಲನ್ನು ಕಪ್ಪು ಮಾಡಲು ವಿವಿಧ ರಾಸಾಯನಿಕ ವಸ್ತುಗಳನ್ನು ಬಳಸಲಾಗುತ್ತದೆ. ಆದರೆ ಇದಕ್ಕೆ ಪ್ರಮುಖ ಕಾರಣ ಏನೆಂಬುದನ್ನು ಅರಿಯುವ ಗೋಜಿಗೇ ಯಾರು ಹೋಗುವುದಿಲ್ಲ. ಮುಖ್ಯವಾಗಿ ಕೆಟ್ಟ ಜೀವನಶೈಲಿಯಿಂದ ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೂದಲು ಬಿಳಿಯಾಗಲು ಹಲವು ಕಾರಣಗಳಿವೆ. ವಿಶೇಷವಾಗಿ ಕೆಟ್ಟ ಜೀವನಶೈಲಿಯು ಇದಕ್ಕೆ ಪ್ರಮುಖ ಕಾರಣ.
ತೆಂಗಿನ ಎಣ್ಣೆ ಕೂದಲಿಗೆ ಬಹಳ ಒಳ್ಳೆಯದು. ಆದರೆ ತೆಂಗಿನ ನಾರು ಸಹ ಬಿಳಿ ಕೂದಲಿಗೆ ಬೆಸ್ಟ್ ಎಂಬುದು ನಿಮಗೆ ತಿಳಿದಿದೆಯೇ?
ಹೌದು ತೆಂಗಿನ ನಾರನ್ನು ಒಂದು ಬಾಣಲೆಯಲ್ಲಿ ಚೆನ್ನಾಗಿ ಹುರಿದು, ಕಪ್ಪು ಬಣ್ಣಕ್ಕೆ ತಿರುಗಿದಾಗ ಅದನ್ನು ಕುಟ್ಟಿ ಪುಡಿ ಮಾಡಬೇಕು. ಬಳಿಕ ಈ ಪುಡಿಯನ್ನು ತೆಂಗಿನೆಣ್ಣೆಯಲ್ಲಿ ಬೆರೆಸಿ ಹಚ್ಚಿದರೆ ಕೇವಲ 10 ನಿಮಿಷದಲ್ಲಿ ರಿಸಲ್ಟ್ ಸಿಗುತ್ತದೆ.
ಇದಲ್ಲದೆ ತೆಂಗಿನೆಣ್ಣೆ ಮತ್ತು ನಿಂಬೆ ಮಿಶ್ರಣವೂ ಸಹ ಬಿಳಿ ಕೂದಲಿಗೆ ಪರಿಣಾಮಕಾರಿ. 10 ನಿಮಿಷಗಳಲ್ಲಿ ಕಪ್ಪು ಕೂದಲು ಪಡೆಯಲು ಈ ಮಿಶ್ರಣಕ್ಕೆ ಸ್ವಲ್ಪ ಗೋರಂಟಿ ಮತ್ತು ಶಿಕಾಕಾಯಿ ಪುಡಿಯನ್ನು ಸೇರಿಸಬೇಕು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.