ತೆಂಗಿನಸಿಪ್ಪೆ ವೇಸ್ಟ್ ಎಂದು ಎಸೆಯದಿರಿ… ಬಿಳಿಕೂದಲನ್ನು ಕ್ಷಣದಲ್ಲಿ ಕಪ್ಪಾಗಿಸಲು ಇದೇ ಸಾಕು!
ತೆಂಗಿನಕಾಯಿಯ ಪ್ರಯೋಜನಕಾರಿ ಗುಣಗಳ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿರುತ್ತದೆ. ಆದರೆ ತೆಂಗಿನ ಸಿಪ್ಪೆಯ ಗುಣಲಕ್ಷಣಗಳ ಬಗ್ಗೆ ನಿಮಗೆ ತಿಳಿದಿದೆಯೇ? ತೆಂಗಿನ ಸಿಪ್ಪೆಯನ್ನು ಎಸೆಯುವುದು ಸಾಮಾನ್ಯ. ಆದರೆ ಆ ಸಿಪ್ಪೆಯಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ನಿವಾರಿಸಬಹುದು.
ಯಾರಾದರೂ ಗಾಯಗೊಂಡರೆ ತೆಂಗಿನ ಎಣ್ಣೆಯನ್ನು ಊದಿಕೊಂಡ ಜಾಗಕ್ಕೆ ಹಚ್ಚುತ್ತೇವೆ. ಅದರೆ ಅದರ ಬದಲಿಗೆ ತೆಂಗಿನ ಸಿಪ್ಪೆಯನ್ನು ಪುಡಿ ಮಾಡಿ ಅದಕ್ಕೆ ಅರಿಶಿನ ಬೆರೆಸಿ ಊತವಿರುವ ಜಾಗಕ್ಕೆ ಹಚ್ಚಿದರೆ ಊತ ಶೀಘ್ರದಲ್ಲೇ ಕಡಿಮೆಯಾಗುತ್ತದೆ.
ಹಲ್ಲುಗಳ ಹಳದಿ ಸಮಸ್ಯೆಯಿಂದ ಜನರು ಹೆಚ್ಚಾಗಿ ತೊಂದರೆಗೊಳಗಾಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ತೆಂಗಿನ ಸಿಪ್ಪೆಯನ್ನು ಬಳಸಿಕೊಂಡು ಹಲ್ಲುಗಳ ಹಳದಿ ಬಣ್ಣವನ್ನು ತೆಗೆದುಹಾಕಬಹುದು. ಇದಕ್ಕಾಗಿ ತೆಂಗಿನ ಸಿಪ್ಪೆಯನ್ನು ಸುಟ್ಟು, ಅದಕ್ಕೆ ಸೋಡಾ ಬೆರೆಸಿ ಹಲ್ಲುಗಳ ಮೇಲೆ ಮೃದುವಾಗಿ ಮಸಾಜ್ ಮಾಡಬೇಕು.
ಬಿಳಿ ಕೂದಲನ್ನು ಕಪ್ಪಾಗಿಸಲು ತೆಂಗಿನ ಸಿಪ್ಪೆಯನ್ನು ಸಹ ಬಳಸಲಾಗುತ್ತದೆ. ತೆಂಗಿನ ಸಿಪ್ಪೆಯನ್ನು ಬಾಣಲೆಯಲ್ಲಿ ಬಿಸಿ ಮಾಡಿ ಪುಡಿ ಮಾಡಿ. ಈ ಪುಡಿಯನ್ನು ತೆಂಗಿನ ಎಣ್ಣೆಯಲ್ಲಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ. ಹೀಗೆ ಮಾಡಿದರೆ ನೈಸರ್ಗಿಕವಾಗಿ ಬಿಳಿಕೂದಲು ಕಪ್ಪಾಗುತ್ತವೆ.
ತೆಂಗಿನ ಸಿಪ್ಪೆಯನ್ನು ಪೈಲ್ಸ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಹ ಬಳಸಬಹುದು. ತೆಂಗಿನ ಸಿಪ್ಪೆಯನ್ನು ಸುಟ್ಟು ಪುಡಿ ಮಾಡಿ ಖಾಲಿ ಹೊಟ್ಟೆಯಲ್ಲಿ ನೀರಿನೊಂದಿಗೆ ಸೇವಿಸಿ. ಇದರಿಂದ ಪೈಲ್ಸ್ ಸಮಸ್ಯೆ ದೂರವಾಗುತ್ತದೆ. ತೆಂಗಿನ ಸಿಪ್ಪೆಯಲ್ಲಿರುವ ನಾರಿನಂಶವು ದೇಹದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)