ಬಿಳಿಕೂದಲನ್ನು ಕೇವಲ 10 ನಿಮಿಷದಲ್ಲಿ ಬುಡದಿಂದಲೇ ಶಾಶ್ವತವಾಗಿ ಕಪ್ಪಾಗಿಸುತ್ತೆ ತೆಂಗಿನಕಾಯಿ ಸಿಪ್ಪೆ
ಬಿಳಿಕೂದಲನ್ನು ಮರೆಮಾಡಲು ರಾಸಾಯನಿಕ ಬಣ್ಣಗಳನ್ನು ಹಚ್ಚಲಾಗುತ್ತದೆ. ಆದರೆ ಇದು ಕೂದಲಿಗೆ ಬಹಳಷ್ಟು ಹಾನಿಯನ್ನುಂಟು ಮಾಡುತ್ತದೆ. ಜೊತೆಗೆ ನೆತ್ತಿಯ ಮೇಲೆ ಪರಿಣಾಮ ಬೀರಿ, ಸ್ಕಿನ್ ಅಲರ್ಜಿ ಆಗುವ ಸಾಧ್ಯತೆಯೂ ಇದೆ.
ಹೀಗಾಗಿ ಕೂದಲಿಗೆ ರಾಸಾಯನಿಕ ಮುಕ್ತ ಬಣ್ಣವನ್ನು ಬಳಸುವುದು ಉತ್ತಮ. ರಾಸಾಯನಿಕ ಮುಕ್ತ ಅಂದರೆ ನೈಸರ್ಗಿಕ ಬಣ್ಣವನ್ನು ಬಳಸಬಹುದು. ಇದಕ್ಕೆ ಖರ್ಚು ಕೂಡ ಕಡಿಮೆ. ಈ ನೈಸರ್ಗಿಕ ಬಣ್ಣವು ನಿಮ್ಮ ಕೂದಲನ್ನು ಕಪ್ಪಾಗಿಸುವುದು ಮಾತ್ರವಲ್ಲದೆ ಹೊಳಪನ್ನು ನೀಡುತ್ತದೆ
ತೆಂಗಿನಕಾಯಿ ಆರೋಗ್ಯದ ಗಣಿ ಎಂದು ಕರೆಯಲಾಗುತ್ತದೆ. ಇದನ್ನು ಪೂಜೆಯಿಂದ ಹಿಡಿದು ಅಡುಗೆಯವರೆಗೆ ಬಳಕೆ ಮಾಡಲಾಗುತ್ತದೆ. ಆದರೆ ಅದರ ನಾರು ಅಥವಾ ಸಿಪ್ಪೆಯನ್ನು ಮೂಲೆಗೆ ಎಸೆಯಲಾಗುತ್ತದೆ.
ಆದರೆ ತೆಂಗಿನಕಾಯಿ ಸಿಪ್ಪೆಯಿಂದ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಇದರಲ್ಲಿ ಯಾವುದೇ ಅಡ್ಡಪರಿಣಾಮವಿಲ್ಲ.
ಹೇರ್ ಡೈ ಮಾಡುವ ಮೊದಲು ತೆಂಗಿನ ಸಿಪ್ಪೆಯಿಂದ ಪೌಡರ್ ಮಾಡಬೇಕು. ಇದಕ್ಕಾಗಿ, ತೆಂಗಿನ ಸಿಪ್ಪೆಯ ನಾರುಗಳನ್ನು ಪ್ರತ್ಯೇಕಿಸಿ. ಕಬ್ಬಿಣದ ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ ಎಲ್ಲಾ ತೆಂಗಿನ ನಾರುಗಳನ್ನು ಹಾಕಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ಅದು ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ಬಳಿಕ ಪುಡಿಮಾಡಿಟ್ಟುಕೊಳ್ಳಿ. ರುಬ್ಬಿದ ಈ ಪುಡಿಯನ್ನು ಜರಡಿ ಮೂಲಕ ಫಿಲ್ಟರ್ ಮಾಡಿ, ಸಂಗ್ರಹಿಸಿ.
ಕೂದಲಿಗೆ ಹಚ್ಚುವ ಮೊದಲು, ಅದನ್ನು ಪೇಸ್ಟ್ ರೂಪದಲ್ಲಿ ಮಾಡಬೇಕು. ಇದಕ್ಕಾಗಿ ಕಬ್ಬಿಣದ ಪ್ಯಾನ್ ತೆಗೆದುಕೊಂಡು ಅದರಲ್ಲಿ ನೆಲ್ಲಿಕಾಯಿ ಪುಡಿಯನ್ನು ಲಘುವಾಗಿ ಕಪ್ಪು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ನಂತರ ತಣ್ಣಗಾಗಲು ಬಿಡಿ. ಅದು ತಣ್ಣಗಾದ ತಕ್ಷಣ ತೆಂಗಿನ ಸಿಪ್ಪೆಯಿಂದ ಮಾಡಿದ ಪುಡಿಯನ್ನು ಅದರಲ್ಲಿ ಮಿಶ್ರಣ ಮಾಡಿ. ಈಗ ಮೇಲೆ ಸಾಸಿವೆ ಎಣ್ಣೆಯನ್ನು ಮಿಶ್ರಣ ಮಾಡಿ. ಎಲ್ಲಾ ಮೂರು ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿದ ನಂತರ, ರಾತ್ರಿಯಿಡೀ ಕಬ್ಬಿಣದ ಪ್ಯಾನ್’ನಲ್ಲಿ ಬಿಡಿ. ನಂತರ ಅದನ್ನು ನಿಮ್ಮ ಕೂದಲಿಗೆ ಸಂಪೂರ್ಣವಾಗಿ ಹಚ್ಚಿ. 1 ರಿಂದ 1.5 ಗಂಟೆಗಳ ಕಾಲ ಬಿಡಿ.
ನಂತರ ಸಾಮಾನ್ಯ ನೀರಿನಿಂದ ಕೂದಲನ್ನು ಚೆನ್ನಾಗಿ ತೊಳೆಯಿರಿ. ಮರುದಿನ, ಶಾಂಪೂ ಬಳಸಿ ಸ್ವಚ್ಛಗೊಳಿಸಿ. ಹೀಗೆ ಮಾಡಿದರೆ ಶೀಘ್ರದಲ್ಲೇ ಬಿಳಿಕೂದಲು ಬುಡದಿಂದಲೇ ಶಾಶ್ವತವಾಗಿ ಕಪ್ಪಾಗುತ್ತದೆ.
ಒಂದು ವೇಳೆ ಶೀಘ್ರವೇ ಬಿಳಿಕೂದಲು ಕಪ್ಪಾಗಬೇಕು ಎಂದಾದಲ್ಲಿ, ಡೈ ಪೌಡರ್ ತೆಗೆದುಕೊಂಡು ಅದಕ್ಕೆ ಅಲೋವೆರಾ ಜೆಲ್ ಅನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ. ಒಂದೂವರೆ ಗಂಟೆಯ ನಂತರ ಸೌಮ್ಯವಾದ ಶಾಂಪೂವಿನಿಂದ ಸ್ವಚ್ಛಗೊಳಿಸಿ. ಅಲೋವೆರಾ ಮತ್ತು ತೆಂಗಿನ ಸಿಪ್ಪೆ ಎರಡೂ ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಈ ನೈಸರ್ಗಿಕ ಬಣ್ಣವನ್ನು 15 ದಿನಗಳಿಗೊಮ್ಮೆ ಹಚ್ಚಿ. ಇದರ ಸಹಾಯದಿಂದ, ನಿಮ್ಮ ಕೂದಲು ದೀರ್ಘಕಾಲದವರೆಗೆ ಕಪ್ಪಾಗಿರುತ್ತದೆ ಮತ್ತು ಹೊಳೆಯುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)