ಕೊಬ್ಬರಿ ಎಣ್ಣೆಯಲ್ಲಿ ಇದನ್ನು ಬೆರೆಸಿ ಹಚ್ಚಿದ್ರೆ ನೈಸರ್ಗಿಕವಾಗಿಯೇ ಕಪ್ಪಾಗುತ್ತೆ ಬಿಳಿ ಕೂದಲು...!
ತಲೆಕೂದಲಿನಲ್ಲಿರುವ ಪಿಗ್ಮೆಂಟ್ಸ್ ಕಡಿಮೆಯಾದಂತೆ ಕೂದಲು ಬೆಳ್ಳಗಾಗುತ್ತದೆ. ಆದರೆ, ಹೇರ್ ಡೈ ಹಾಕದೆಯೇ ಬಿಳಿ ಕೂದಲನ್ನು ಕಪ್ಪು ಬಣ್ಣಕ್ಕೆ ತಿರುಗಿಸಬಹುದು.
ಯಾವುದೇ ಕೆಮಿಕಲ್ಸ್ ಇಲ್ಲದೆಯೇ ಕೊಬ್ಬರಿ ಎಣ್ಣೆಯಲ್ಲಿ ಕೇವಲ ಒಂದು ರಸ ಬೆರೆಸಿ ಹಚ್ಚಿದರೆ ಕೂದಲು ನೈಸರ್ಗಿಕವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ಎರಡು ಚಮಚ ಕೊಬ್ಬರಿ ಎಣ್ಣೆಗೆ ಒಂದು ಸ್ಪೂನ್ ನಷ್ಟು ನಿಂಬೆ ರಸವನ್ನು ಹಾಕಿ ಎರಡೂ ಹೊಂದಿಕೊಳ್ಳುವವರೆಗೂ ಚೆನ್ನಾಗಿ ಮಿಕ್ಸ್ ಮಾಡಿ.
ಕೊಬ್ಬರಿ ಎಣ್ಣೆ ನಿಂಬೆ ಮಿಶ್ರಿತ ಎಣ್ಣೆಯನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ, ಲಘುವಾಗಿ ಮಸಾಜ್ ಮಾಡಿ.
ಕೊಬ್ಬರಿ ಎಣ್ಣೆಯಲ್ಲಿ ನಿಂಬೆ ರಸ ಮಿಕ್ಸ್ ಮಾಡಿ ಬಳಸುವುದರಿಂದ ಕೂದಲಿನಲ್ಲಿರುವ ಫಲಿಕಲ್ಸ್ ನಲ್ಲಿ ನಿರ್ಜೀವವಾಗಿರುವ ಪಿಗ್ಮೆಂಟ್ಸ್ ಅನ್ನು ಇದು ಆಕ್ಟಿವೇಟ್ ಮಾಡುತ್ತದೆ. ಇದರಿಂದ ಬಿಳಿ ಕೂದಲು ಕ್ರಮೇಣ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ಕೊಬ್ಬರಿ ಎಣ್ಣೆಯಲ್ಲಿ ನಿಂಬೆರಸ ಬೆರೆಸಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿದ ಅರ್ಧ ಗಂಟೆ ಬಳಿಕ (ಬೇಕಿದ್ದರೆ ರಾತ್ರಿ ಕೂದಲಿಗೆ ಎಣ್ಣೆ ಹಚ್ಚಿ ಬೆಳಿಗ್ಗೆ ಹೇರ್ ವಾಶ್ ಮಾಡಬಹುದು) ಉಗುರು ಬೆಚ್ಚಗಿನ ನೀರಿನಿಂದ ಸೌಮ್ಯವಾದ ಶಾಂಪೂ ಬಳಸಿ ಹೇರ್ ವಾಶ್ ಮಾಡಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.