ತೆಂಗಿನ ಎಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿ ಬಿಳಿ ಕೂದಲು 20 ನಿಮಿಷದಲ್ಲಿ ಬುಡದಿಂದಲೇ ಕಡು ಕಪ್ಪಾಗಿ.. ಉದ್ದವಾಗಿ ಬೆಳೆಯುತ್ತೆ!
ಚಿಕ್ಕ ವಯಸ್ಸಿನಲ್ಲಿಯೇ ಜನರ ಕೂದಲು ಬಿಳಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದರೆ ನೀವು ಈ ಮನೆಮದ್ದು ಬಳಸಿ ಮತ್ತೆ ಕಪ್ಪಾಗಿಸಬಹುದು.
ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತೆಂಗಿನ ಎಣ್ಣೆ ತುಂಬಾ ಪ್ರಯೋಜನಕಾರಿ. ಇದನ್ನು ವಿವಿಧ ವಸ್ತುಗಳೊಂದಿಗೆ ಬೆರೆಸಿ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ.
ಬಿಳಿ ಕೂದಲನ್ನು ಕಪ್ಪಾಗಿಸಲು ಕಾಫಿ ಪುಡಿ ಮತ್ತು ತೆಂಗಿನೆಣ್ಣೆಯಿಂದ ಮನೆಯಲ್ಲೇ ಹೇರ್ ಡೈ ತಯಾರಿಸಬಹುದು. ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತದೆ.
ಮೊದಲಿಗೆ ಒಂದು ಬಟ್ಟಲಿನಲ್ಲಿ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಇದನ್ನು 20 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ಈಗ ಇದಕ್ಕೆ ಕಾಫಿ ಪುಡಿ ಬೆರೆಸಿ ಚೆನ್ನಾಗಿ ಕಲಿಸಿ.
ಕಾಫಿ ಪುಡಿ ಮತ್ತು ತೆಂಗಿನೆಣ್ಣೆಯ ಈ ಮಿಶ್ರಣವನ್ನು ಕೂದಲಿಗೆ ಬುಡದಿಂದ ತುದಿಯವರೆಗೆ ಹಚ್ಚಿಕೊಳ್ಳಿ. ನಂತರ 2 ಗಂಟೆಗಳವರೆಗೆ ಬಿಟ್ಟು ಬಳಿಕ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಇದನ್ನು ವಾರಕ್ಕೆ ಎರಡು ಬಾರಿ ಬಳಸಬಹುದು.
ಇದರಿಂದ ಬಿಳಿ ಕೂದಲು ಕಪ್ಪಾಗುವುದಲ್ಲದೇ, ಮತ್ತೆ ಮರುಳುವುದಿಲ್ಲ. (ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.)