ತೆಂಗಿನೆಣ್ಣೆಯಲ್ಲಿ ಈ ಎರಡು ಪದಾರ್ಥ ಬೆರೆಸಿ ತಲೆಗೆ ಹಚ್ಚಿ, ಬಿಳಿ ಕೂದಲು ಬುಡದಿಂದಲೇ ಕಪ್ಪಾಗುವುದು!
ನಿಮ್ಮ ಬಿಳಿ ಕೂದಲು ಕೆಲವೇ ದಿನಗಳಲ್ಲಿ ಬುಡದಿಂದಲೇ ಕಪ್ಪಾಗಲು ನೀವು ಕೆಲವು ನೈಸರ್ಗಿಕ ಪದಾರ್ಥಗಳನ್ನು ಬಳಸಬಹುದು. ತೆಂಗಿನ ಎಣ್ಣೆಯ ಜೊತೆ ಈ ಎರಡು ಪದಾರ್ಥ ಬೆರೆಸಿ ಬಳಸಿದರೆ ಕಪ್ಪು ದಟ್ಟ ಕೇಶರಾಶಿ ನಿಮ್ಮದಾಗುವುದು.
ತೆಂಗಿನ ಎಣ್ಣೆ ಕೂದಲಿನ ತೇವಾಂಶವನ್ನು ಕಾಪಾಡುತ್ತದೆ. ನಿತ್ಯವೂ ಕೊಬ್ಬರಿ ಎಣ್ಣೆಯನ್ನು ಹಚ್ಚಿದರೆ ಹಲವು ರೀತಿಯ ಕೂದಲಿನ ಸಮಸ್ಯೆ ಕಡಿಮೆಯಾಗುತ್ತವೆ.
ಮೆಂತ್ಯ ಕಾಳುಗಳು ಬಿಳಿ ಕೂದಲನ್ನು ಹೋಗಲಾಡಿಸಲು ತುಂಬಾ ಪರಿಣಾಮಕಾರಿ. ಕೂದಲು ಉದುರುವ ಸಮಸ್ಯೆಯನ್ನು ಸಹ ಪರಿಹರಿಸುತ್ತದೆ. ಇದು ಬೇರುಗಳಿಂದ ಕೂದಲನ್ನು ಬಲಪಡಿಸುತ್ತದೆ. ಅಲ್ಲದೆ ಕೂದಲನ್ನು ಕಪ್ಪಾಗಿಸುತ್ತದೆ.
ಮೆಂತ್ಯ ಬೀಜಗಳನ್ನು ಚೆನ್ನಾಗಿ ರುಬ್ಬಿಕೊಳ್ಳಿ. ಸುಮಾರು 3 ರಿಂದ 4 ಚಮಚ ತೆಂಗಿನ ಎಣ್ಣೆಯಲ್ಲಿ 1 ಚಮಚ ಮೆಂತ್ಯ ಪುಡಿಯನ್ನು ಸೇರಿಸಿ, ಚೆನ್ನಾಗಿ ಕುದಿಸಿ.
ಅದನ್ನು ತಣ್ಣಗಾಗಿಸಿ ಮತ್ತು ವಾರಕ್ಕೆ ಎರಡು ಬಾರಿ ಕೂದಲಿಗೆ ಹಚ್ಚಿ. ಇದರಿಂದ ಬಿಳಿ ಕೂದಲಿನ ಸಮಸ್ಯೆ ಕ್ರಮೇಣ ನಿವಾರಣೆಯಾಗುವುದು.
ಬಿಳಿ ಕೂದಲಿನ ಸಮಸ್ಯೆಗೆ ಕರಿಬೇವಿನ ಎಲೆ ಮತ್ತೊಂದು ಪರಿಣಾಮಕಾರಿ ಪರಿಹಾರ. ಇದನ್ನು ಕೂದಲಿಗೆ ಹಚ್ಚಿದರೆ ಕಪ್ಪು ಕೇಶರಾಶಿ ನಿಮ್ಮದಾಗುವುದು.
ಮೊದಲು 1 ಬೌಲ್ ತೆಂಗಿನ ಎಣ್ಣೆ ತೆಗೆದುಕೊಂಡು, ಒಂದು ಹಿಡಿ ಕರಿಬೇವಿನ ಎಲೆ ಸೇರಿಸಿ ಚೆನ್ನಾಗಿ ಬಿಸಿ ಮಾಡಿ. ಎಣ್ಣೆ ಬಣ್ಣ ಬದಲಾದಾಗ ಕೆಳಸಿಳಿಸಿ, ತಣ್ಣಗಾದ ಮೇಲೆ ಕೂದಲಿಗೆ ಹಚ್ಚಿಕೊಳ್ಳಿ.
ಇದು ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಈ ಎಣ್ಣೆಯನ್ನು ಹಚ್ಚಿ ಮತ್ತು ಬೆಳಗ್ಗೆ ತಲೆಸ್ನಾನ ಮಾಡಿದರೆ ಉತ್ತಮ ಫಲಿತಾಂಶ ನೀಡುತ್ತದೆ.