ತೆಂಗಿನೆಣ್ಣೆಗೆ ಈ ಎಲೆಯ ರಸ ಬೆರೆಸಿ ಹಚ್ಚಿದರೆ ಹತ್ತೇ ನಿಮಿಷದಲ್ಲಿ ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತೆ ಬಿಳಿ ಕೂದಲು.. ಸೊಂಪಾಗಿ ಉದ್ದವಾಗಿಯೂ ಬೆಳೆಯುತ್ತೆ !
ಕೂದಲು ಚಿಕ್ಕ ವಯಸ್ಸಿಗೆ ಬಿಳಿಯಾದರೆ ಅದು ಅಂದವನ್ನು ಹಾಳು ಮಾಡುತ್ತದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಹೇರ್ ಕಲರ್, ಡೈ ಬಳಸುವವರಿದ್ದಾರೆ. ಆದರೆ ಇದರ ಅಡ್ಡ ಪರಿಣಾಮಗಳು ಹೆಚ್ಚು.
ಕೂದಲಿಗೆ ಹೇರ್ ಡೈ ಬದಲು ಕೆಲವು ಮನೆ ಮದ್ದುಗಳನ್ನು ಬಳಸಿದರೆ ಬಿಳಿ ಕೂದಲು ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಹುದು.
ತೆಂಗಿನ ಎಣ್ಣೆ ಬಿಳಿ ಕೂದಲನ್ನು ಬೇರಿನಿಂದಲೇ ಕಪ್ಪಾಗಿಸುವ ಗುಣಗಳನ್ನು ಹೊಂದಿದೆ. ತೆಂಗಿನೆಣ್ಣೆಯಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಮೆಲನಿನ್ ಬಿಳಿ ಕೂದಲನ್ನ ಮರಳಿ ಕಪ್ಪಾಗಿಸುತ್ತವೆ.
ಬಿಳಿ ಕೂದಲನ್ನು ಕಪ್ಪಾಗಿಸಲು ತುಳಸಿ ಎಲೆ ಕೂಡಾ ಉತ್ತಮ ಪರಿಹಾರವಾಗಿದೆ. ಬಿಳಿಕೂದಲು ಮಾತ್ರವಲ್ಲ ಕೂದಲು ಉದುರುವ ಸಮಸ್ಯೆಗೂ ಪರಿಹಾರವನ್ನು ನೀಡುತ್ತದೆ.
ತುಳಸಿ ಎಲೆಯ ರಸವನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲು ಕಪ್ಪಾಗುವುದರ ಜೊತೆಗೆ ಬೇರುಗಳಿಂದಲೇ ಬಲಗೊಳ್ಳುತ್ತವೆ.
ತೆಂಗಿನೆಣ್ಣೆ ಮತ್ತು ತುಳಸಿ ಎಲೆಯ ರಸವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಸ್ವಲ್ಪ ಕಾಫಿ ಪುಡಿ ಮತ್ತು ಮೆಹೆಂದಿ ಎಲೆಯ ಪುಡಿಯನ್ನು ಬೆರೆಸಬೇಕು. ಕೂದಲು ಮತ್ತು ನೆತ್ತಿಯ ಮೇಲೆ ಹಚ್ಚಿ ಮಸಾಜ್ ಮಾಡಿ. ಸುಮಾರು 1 ಗಂಟೆಯ ನಂತರ ಶಾಂಪೂ ಬಳಸಿ ತಲೆ ಸ್ನಾನ ಮಾಡಿ.
ತೆಂಗಿನೆಣ್ಣೆ ಮತ್ತು ತುಳಸಿ ಎಲೆಯ ರಸ ಕೂದಲನ್ನು ಬೇರಿನಿಂದಲೇ ಬಲವಾಗಿಸುತ್ತದೆ. ಇದನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವಿಕೆ ಸಮಸ್ಯೆ ಕೂಡಾ ದೂರವಾಗುವುದು.
ಸೂಚನೆ: ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ವಹಿಸುವುದಿಲ್ಲ.