ತೆಂಗಿನೆಣ್ಣೆ ಜೊತೆ ಈ ಮಸಾಲೆ ಬೆರೆಸಿ ಹಚ್ಚಿ.. ಬಿಳಿ ಕೂದಲು 10 ದಿನದಲ್ಲಿ ಕಪ್ಪಾಗುವುದು!
ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲು ಸಾಮಾನ್ಯ ಸಮಸ್ಯೆಯಾಗಿದೆ. ಚಿಕ್ಕವಯಸ್ಸಿನಲ್ಲಿಯೇ ಬಿಳಿ ಕೂದಲು ಕಾಣಿಸಿಕೊಳ್ಳುತ್ತದೆ. ಕೂದಲನ್ನು ಕಪ್ಪಾಗಿಸಲು ಜನರು ಕೆಮಿಕಲ್ ಯುಕ್ತ ಹೇರ್ ಕಲರ್ ಬಳಸುತ್ತಾರೆ.
ಆದರೆ ಇದು ಆರೋಗ್ಯಕ್ಕೆ ಉತ್ತಮವಲ್ಲ. ಇದರ ಬದಲು ಕೆಲವು ಮನೆಮದ್ದುಗಳನ್ನು ಬಳಸಿ ಬಿಳಿಕೂದಲನ್ನು ಶಾಸ್ವವಾಗಿ ಕಪ್ಪಾಗಿಸಬಹುದು.
ದಾಲ್ಚಿನ್ನಿ ಅನೇಕ ಆಯುರ್ವೇದ ಗುಣಗಳನ್ನು ಹೊಂದಿದೆ. ಇದನ್ನು ಬಳಸಿ ತಯಾರಿಸಿದ ಆಹಾರಗಳನ್ನು ಸೇವಿಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಇದು ಆರೋಗ್ಯಕ್ಕೆ ಮಾತ್ರವಲ್ಲ ಕೂದಲಿಗೂ ಉಪಯುಕ್ತವಾಗಿದೆ.
ದಾಲ್ಚಿನ್ನಿ ಹೇರ್ ಮಾಸ್ಕ್ ಬಳಸುವುದರಿಂದ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತವೆ. ಅಲ್ಲದೇ ಇದರಿ/ಮದ ಯಾವುದೇ ಸೈಡ್ ಎಫೆಕ್ಟ್ ಇರುವುದಿಲ್ಲ.
ದಾಲ್ಚಿನ್ನಿ ಹೇರ್ ಮಾಸ್ಕ್ ಮಾಡಲು ಮೊದಲು ಅರ್ಧ ಕಪ್ ದಾಲ್ಚಿನ್ನಿ ಪುಡಿ ಮತ್ತು ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಒಂದು ಬಟ್ಟಲಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. 15 ನಿಮಿಷಗಳ ಕಾಲ ಮಿಶ್ರಣವನ್ನು ಹಾಗೇ ಇಡಿ. ನಂತರ ಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಒಣಗಲು ಬಿಡಿ.
ದಾಲ್ಚಿನ್ನಿ ಹೇರ್ ಮಾಸ್ಕ್ ಹಾಕಿ 30 ನಿಮಿಷಗಳ ಬಳಿಕ ಮೈಲ್ಡ್ ಶಾಂಪೂ ಬಳಸಿ ಕೂದಲನ್ನು ವಾಶ್ ಮಾಡಿ. ಇದು ಕೇವಲ 10 ದಿನಗಳಲ್ಲಿ ನಿಮ್ಮ ಬಿಳಿ ಕೂದಲಿನ ಸಮಸ್ಯೆಗೆ ಮುಕ್ತಿ ನೀಡುತ್ತದೆ.
ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ.