ಮನೆಯ ಹಿತ್ತಲಲ್ಲಿ ಬೆಳೆಯಬಹುದಾದ ಈ ಎಲೆಗಳನ್ನು ತೆಂಗಿನೆಣ್ಣೆಯಲ್ಲಿ ಬೆರೆಸಿ ಬಳಸಿದರೆ ಸಾಕು ಬಿಳಿ ಕೂದಲು ಕಪ್ಪಾಗಿ ನೀಳವಾಗಿ ಬೆಳೆಯುತ್ತೆ!
ತೆಂಗಿನೆಣ್ಣೆಯಲ್ಲಿ ಕಂಡು ಬರುವ ವಿವಿಧ ಬಗೆಯ ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು ಕೂದಲಿಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
ತೆಂಗಿನೆಣ್ಣೆಯನ್ನು ಕರಿಬೇವಿನ ಎಲೆಗಳೊಂದಿಗೆ ಬೆರೆಸಿಟ್ಟು ಬಳಸುವುದು ಕೂದಲಿಗೆ ನಾನಾ ಲಾಭಗಳನ್ನು ನೀಡಬಲ್ಲದು.
ಯುವಿ ಕಿರಣಗಳ ವಿರುದ್ಧ ಕೂದಲನ್ನು ರಕ್ಷಿಸುವ ತೆಂಗಿನೆಣ್ಣೆ ಚರ್ಮದ ಸಮಸ್ಯೆಗಳ ವಿರುದ್ಧವೂ ಹೋರಾಡಬಲ್ಲದು. ಹಿತ್ತಲಲ್ಲಿ ಸುಲಭವಾಗಿ ಬೆಳೆಯಬಹುದಾದ ಕರಿಬೇವಿನ ಎಲೆಗಳಲ್ಲಿ ಬೀಟಾ-ಕ್ಯಾರೊಟಿನ್ ಹಾಗೂ ಕೂದಲಿಗೆ ಅಗತ್ಯವಾದ ಹಲವು ಪ್ರೊಟೀನ್ಗಳು ಸಮೃದ್ಧವಾಗಿದೆ.
ಕರಿಬೇವಿನ ಎಲೆಗಳ ಬಳಕೆಯಿಂದ ಕೂದಲಿಗೆ ನೈಸರ್ಗಿಕ ಬಣ್ಣ ದೊರೆಯುತ್ತದೆ. ಇದಲ್ಲದೆ, ಕೂದಲುದುರುವಿಕೆ ಕಡಿಮೆಯಾಗಿ ಕೂದಲು ಬುಡದಿಂದಲೂ ಗಟ್ಟಿಯಾಗಿ ಉದ್ದವಾಗಿ ಬೆಳೆಯುತ್ತದೆ.
ಒಂದು ಬಟ್ಟಲಿನಲ್ಲಿ ಸ್ವಲ್ಪ ತೆಂಗಿನೆಣ್ಣೆ ಹಾಕಿ ಬಿಸಿ ಮಾಡಿ ಇದರಲ್ಲಿ ಕರಿಬೇವಿನ ಎಲೆಗಳನ್ನು ಬೆರೆಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಿ. ಎಣ್ಣೆ ಬೆಚ್ಚಗಾದ ಬಳಿಕ ಇದನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ಒಂದು ದಿನ ಬಿಟ್ಟು ಸೌಮ್ಯ ಶಾಂಪೂವಿನಿಂದ ಹೇರ್ ವಾಶ್ ಮಾಡಿದ್ರೆ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.