ತೆಂಗಿನೆಣ್ಣೆಗೆ ಈ ಕಾಳನ್ನು ಬೆರೆಸಿ ಹಚ್ಚಿದರೆ ಕೆಲವೇ ಸೆಕೆಂಡುಗಳಲ್ಲಿ ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತೆ ಬಿಳಿ ಕೂದಲು
ತೆಂಗಿನೆಣ್ಣೆ ಕೂದಲಿನ ಆರೋಗ್ಯಕ್ಕೆ ಹಲವು ವಿಧದಲ್ಲಿ ಲಾಭದಾಯಕ. ತೆಂಗಿನೆಣ್ಣೆಯೊಂದಿಗೆ ಈ ಒಂದು ಕಾಳನ್ನು ಬೆರೆಸಿ ಹಚ್ಚಿದ್ರೆ ಬಿಳಿ ಕೂದಲು ಕೆಲವೇ ಸೆಕೆಂಡುಗಳಲ್ಲಿ ಗಾಢ ಕಪ್ಪು ಬಣ್ಣಕ್ಕೆ ತಿರುಗುವುದರಲ್ಲಿ ಅನುಮಾನವೇ ಇಲ್ಲ.
ಬ್ಯಾಕ್ಟೀರಿಯಾ ವಿರೋಧಿ ಹಾಗೂ ಆಂಟಿ-ಆಕ್ಸಿಡೆಂಟ್ ಗುಣಗಳಿಂದ ಹೇರಳವಾಗಿರುವ ತೆಂಗಿನೆಣ್ಣೆ ಕೂದಲಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ.
ತೆಂಗಿನೆಣ್ಣೆಯಲ್ಲಿ ಈ ಕಾಳಿನ ಬಳಕೆಯಿಂದ ಬಿಳಿ ಕೂದಲು ಕಪ್ಪಾಗುವುದಷ್ಟೇ ಅಲ್ಲ, ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಯಾಗಿ ಮೊಣಕಾಲಿನವರೆಗೂ ಬೆಳೆಯುತ್ತೆ.
ಹಲವಾರು ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಮೆಂತ್ಯ ಕಾಳುಗಳಲ್ಲಿ ಕೂದಲಿನ ಸರ್ವ ಸಮಸ್ಯೆಗೂ ಪರಿಹಾರ ಅಡಕವಾಗಿದೆ.
ಎರಡು ಚಮಚ ಮೆಂತ್ಯ ಕಾಳುಗಳನ್ನು ಕಬ್ಬಿಣದ ತವಾ ಅಥವಾ ಬಾಣಲೆಯಲ್ಲಿ ಅದು ಕಪ್ಪು ಬಣ್ಣಕ್ಕೆ ತಿರುಗುವವರೆಗೂ ಹುರಿದು, ಬಳಿಕ ಇದನ್ನು ಮಿಕ್ಸಿ ಮಾಡಿ. ಪುಡಿಯನ್ನು ಜರಡಿಯಾಡಿ ತೆಂಗಿನೆಣ್ಣೆಯಲ್ಲಿ ಬೆರೆಸಿ ಹಚ್ಚಿದ್ರೆ ಕೂಡಲೇ ಬಿಳಿ ಕೂದಲು ಗಾಢ ಕಪ್ಪಾಗುತ್ತೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ಹೇಳಿಕೊಳ್ಳುವುದಿಲ್ಲ.