ತೆಂಗಿನೆಣ್ಣೆಯಲ್ಲಿ ಈ 2 ಪದಾರ್ಥ ಬೆರೆಸಿಟ್ಟು ಬಳಸಿ ನೋಡಿ...! ಮೊಣಕಾಲುದ್ದ ದಟ್ಟ ಕೂದಲು ಹೊಂದುವುದಷ್ಟೇ ಅಲ್ಲ, ಬಿಳಿ ಕೂದಲಿನಿಂದಲೂ ರಿಲೀಫ್!
ಕೂದಲಿನ ಆರೋಗ್ಯಕ್ಕೆ ತೆಂಗಿನೆಣ್ಣೆ ಪರಿಣಾಮಕಾರಿ ಪರಿಹಾರವಾಗಿದೆ. ಹಾಗಾಗಿಯೇ ಆಯುರ್ವೇದದಲ್ಲಿ ಸಾವಿರಾರು ವರ್ಷಗಳಿಂದ ಇದನ್ನು ಬಳಸಲಾಗುತ್ತಿದೆ.
ತೆಂಗಿನೆಣ್ಣೆಯಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ, ಕೂದಲಿನ ಸರ್ವ ಸಮಸ್ಯೆಗಳಿಗೂ ನೈಸರ್ಗಿಕ ಪರಿಹಾರವಾಗಿದೆ.
ಬೂದು ಬಣ್ಣಕ್ಕೆ ತಿರುಗಿರುವ ಕೂದಲನ್ನು ಮತ್ತೆ ನೈಸರ್ಗಿಕ ಬಣ್ಣಕ್ಕೆ ಮರಳುವಂತೆ ಮಾಡಲು ಕೂಡ ತೆಂಗಿನೆಣ್ಣೆ ಲಾಭದಾಯಕವಾಗಿದೆ. ಆದರೆ ಇದಕ್ಕಾಗಿ ತೆಂಗಿನೆಣ್ಣೆಯಲ್ಲಿ ಎರಡು ಪದಾರ್ಥಗಳನ್ನು ಬೆರೆಸಿ ಬಳಸಬೇಕು.
ಗೋರಂಟಿ ಎಲೆಗಳಲ್ಲಿ ಕೂದಲಿಗೆ ನೈಸರ್ಗಿಕ ಬಣ್ಣ ನೀಡುವ ಅಂಶಗಳು ಅಡಕವಾಗಿವೆ. ಇದು ಕೂದಲನ್ನು ಯಾವುದೇ ಅಡ್ಡಪರಿಣಾಮಗಳಿಲ್ಲದೇ ಕಪ್ಪಾಗಿಸುತ್ತದೆ.
ಆಮ್ಲಾದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸಿ ನೈಸರ್ಗಿಕವಾಗಿ ಕೂದಲಿಗೆ ಕಪ್ಪು ಬಣ್ಣ ನೀಡುವ ಅದ್ಭುತ ಗಿಡಮೂಲಿಕೆ ಆಗಿದೆ.
ಗೋರಂಟಿ ಎಲೆಗಳನ್ನು ತೆಂಗಿನಣ್ಣೆಯಲ್ಲಿ ಮಿಶ್ರಣ ಮಾಡಿ ಸಣ್ಣ ಉರಿಯಲ್ಲಿ ಎಣ್ಣೆ ಬಣ್ಣ ಕಂಡು ಬಣ್ಣಕ್ಕೆ ತಿರುಗುವವರೆಗೆ ಕುಸಿದಿ. ನಂತರ ಇದರಲ್ಲಿ ಆಮ್ಲಾ ಪುಡಿಯನ್ನು ಹಾಕಿ ಅದು ಕರಗುವವರೆಗೂ ಕಾಯಿಸಿ.
ಕಾಯಿಸಿಟ್ಟ ಎಣ್ಣೆ ತಣ್ಣಗಾದ ನಂತರ ಈ ಎಣ್ಣೆಯನ್ನು ಒಂದು ಗಾಜಿನ ಸೀಸೆಯಲ್ಲಿ ಸಂಗ್ರಹಿಸಿ ಇಡಿ.
ಆಮ್ಲಾ ಪುಡಿ, ಗೋರಂಟಿ ಎಲೆಗಳನ್ನು ತೆಂಗಿನೆಣ್ಣೆಯೊಂದಿಗೆ ಬಳಸುವುದರಿಂದ ಕೂದಲಿಗೆ ಬೇರುಗಳಿಂದ ನೈಸರ್ಗಿಕ ಕಪ್ಪು ಬಣ್ಣ ದೊರೆಯುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.