ಬಿಳಿ ಕೂದಲನ್ನು ಹೇಳ ಹೆಸರಿಲ್ಲದಂತೆ ಮಾಯವಾಗಿಸುತ್ತೆ `ಕಾಫಿ`! ಹೇಗ್ ಗೊತ್ತಾ?
ಒತ್ತಡ ಭರಿತ ಜೀವನ, ವಾಯುಮಾಲಿನ್ಯ, ಧೂಳು, ಕಲುಷಿತ ವಾತಾವಾರಣದಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುತ್ತದೆ.
ಬೆಸ್ಟ್ ರಿಫ್ರೇಶರ್ ಎಂದು ಹೆಸರುವಾಸಿಯಾಗಿರುವ ಕಾಫಿ ಪುಡಿ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಬಿಳಿ ಕೂದಲನ್ನು ಸುಲಭವಾಗಿ ಕಪ್ಪು ಬಣ್ಣಕ್ಕೆ ತಿರುಗಿಸುತ್ತದೆ.
ಕಾಫಿ ಹೇರ್ ಮಾಸ್ಕ್ ತಯಾರಿಸಲು ಮೊದಲಿಗೆ ಒಂದು ಬಟ್ಟಲಿನಷ್ಟು ನೀರನ್ನು ಗ್ಯಾಸ್ ಮೇಲಿಟ್ಟು ಕಾಯಿಸಿ. ನೀರು ಬಿಸಿಯಾದಾಗ ಕಾಫಿಪುಡಿಯಲ್ಲಿ ಇದರಲ್ಲಿ ಹಾಕಿ ಕಲಕಿ. ಸಣ್ಣ ಉರಿಯಲ್ಲಿ ಡಿಕಾಕ್ಷನ್ ಸ್ವಲ್ಪ ಗಟ್ಟಿಯಾಗುವವರೆಗೂ ಕಾಯಿಸಿ ನಂತರ ಆಮ್ಲಾ ಪುಡಿಯನ್ನು ಹಾಕಿ ಬೆರೆಸಿ ಸ್ಟೌವ್ ಆರಿಸಿ. ಇದು ತಣ್ಣಗಾಗಲು ಬಿಡಿ.
ವಾಶ್ ಮಾಡಿ ಒಣಗಿರುವ ಕೂದಲಿಗೆ ತಯಾರಿಸಿಟ್ಟ ಕಾಫಿ ಹೇರ್ ಮಾಸ್ಕ್ ಗೆ ಅರ್ಧ ಚಮಚ ನಿಂಬೆ ರಸವನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ. ಮೂರ್ನಾಲ್ಕು ಗಂಟೆಗಳ ಬಳಿಕ ಹೇರ್ ವಾಶ್ ಮಾಡಿ.
ಕಾಫಿ ಹೇರ್ ಡೈ ಕೂದಲನ್ನು ನೈಸರ್ಗಿಕವಾಗಿ ಗಾಢ ಕಪ್ಪು ಬಣ್ಣಕ್ಕೆ ತಿರುಗಿಸುತ್ತದೆ. ಜೊತೆಗೆ ಕೂದಲು ಕಾಂತಿಯುತವೂ ಆಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.