ಸುಂದರ, ಹೊಳೆಯುವ ತ್ವಚೆಗೂ ಲಾಭದಾಯಕ ಕಾಫಿಪುಡಿ! ಹೇಗ್ ಗೊತ್ತಾ?
ನಮ್ಮ ದೈನಂದನ ಜೀವನದಲ್ಲಿ ಬೆರೆತು ಹೋಗಿರುವ ಕಾಫಿ ನಮ್ಮ ಆರೋಗ್ಯಕ್ಕಷ್ಟೇ ಅಲ್ಲ ಚರ್ಮದ ಆರೋಗ್ಯಕ್ಕೂ ಹಲವು ರೀತಿಯಲ್ಲಿ ಲಾಭದಾಯಕವಾಗಿದೆ.
ಕಾಫಿ ಪುಡಿಯನ್ನು ಸ್ಕ್ರಬ್, ಫೇಸ್ ಪ್ಯಾಕ್ ಆಗಿ ಬಳಸುವುದರಿಂದ ಇದು ನಮ್ಮನ್ನು ಹಲವು ಚರ್ಮ ಸಂಬಂಧಿತ ಸಮಸ್ಯೆಗಳಿಂದ ರಕ್ಷಿಸಿ ಕಾಂತಿಯುತ ಸುಂದರ ತ್ವಚೆಯನ್ನು ಹೊಂದಲು ಪ್ರಯೋಜನಕಾರಿ ಆಗಿದೆ.
ಡೆಡ್ ಸ್ಕಿನ್ ನಿವಾರಿಸಿ ಮೃದುವಾದ ಕೋಮಲ ತ್ವಚೆ ಪಡೆಯಲು ಕಾಫಿಪುಡಿ ಲಾಭದಾಯಕ.
ಕಾಫಿ ಪುಡಿಯಲ್ಲಿ ಹಾಲು ಆಲಿವ್ ಎಣ್ಣೆಯನ್ನು ಬೆರೆಸಿ ಮುಖಕ್ಕೆ ಸ್ಕ್ರಬ್ ಮಾಡುವುದರಿಂದ ಚರ್ಮದ ಶುಷ್ಕತೆಯನ್ನು ತಡೆಗಟ್ಟಬಹುದು.
ಹಾಲು, ಜೇನುತುಪ್ಪದೊಂದಿಗೆ ಕಾಫಿಪುಡಿ ಬೆರೆಸಿ ಫೇಸ್ ಪ್ಯಾಕ್ ಅನ್ವಯಿಸುವುದರಿಂದ ಚರ್ಮದ ಟ್ಯಾನ್ ಅನ್ನು ರಿಮೂವ್ ಮಾಡಬಹುದು.
ನೀವು ಆಯ್ಲಿ ಸ್ಕಿನ್ ಸಮಸ್ಯೆ ಹೊಂದಿದ್ದರೆ ಕಾಫಿಪುಡಿಯಲ್ಲಿ ಮೊಸರನ್ನು ಹಾಕಿ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿ ಅರ್ಧಗಂಟೆ ಬಳಿಕ ಶುದ್ಧವಾದ ನೀರಿನಿಂದ ಫೇಸ್ ವಾಶ್ ಮಾಡುವುದು ಲಾಭದಾಯಕ.
ಕಾಫಿಪುಡಿಯನ್ನು ರೋಸ್ ವಾಟರ್ ಜೊತೆಗೆ ಬೆರೆಸಿ ಫೇಸ್ ಪ್ಯಾಕ್ ಹಚ್ಚುವುದರಿಂದ ಇದು ಸೆಲ್ಯುಲೈಟ್ ಅನ್ನು ಕಡಿಮೆ ಮಾಡುತ್ತದೆ. ಇದರಿಂದ ಕೊಬ್ಬಿನ ಕೋಶಗಳು ನಿರ್ಜಲೀಕರಣಗೊಂಡು ಚರ್ಮ ಮೃದುವಾಗುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.
ಕಾಫಿ ಪುಡಿ ಫೇಸ್ ಪ್ಯಾಕ್ ಹಚ್ಚುವುದರಿಂಡ್ ಇದು ಮುಖ ಹಾಗೂ ಕುತ್ತಿಗೆ ಭಾಗದಲ್ಲಿ ಕಂಡು ಬರುವ ಡಾರ್ಕ್ ಸರ್ಕಲ್ಸ್ ಸಮಸ್ಯೆಗೆ ಸುಲಭ ಪರಿಹಾರವನ್ನು ನೀಡಬಲ್ಲದು.
ಕಾಫಿ ಪುಡಿ ಉತ್ಕರ್ಷಣ ನಿರೋಧಕಗಳಲ್ಲಿ ಹೆರಳವಾಗಿದ್ದು ಇದು ಚರ್ಮವನ್ನು ಹಾನಿಕಾರಕ ವಿಕಿರಣಗಳಿಂದ ರಕ್ಷಿಸುತ್ತದೆ ಎಂದು ಕೆಲವು ಸಂಶೋಧನೆಗಳಿಂದ ತಿಳಿದುಬಂದಿದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.