ಡೈ, ಕಲರ್ ಎಂತದ್ದೂ ಬೇಡ… ಕಾಫಿ ಪುಡಿ ಇದ್ದರೆ 10 ನಿಮಿಷದಲ್ಲಿ ಬಿಳಿಕೂದಲನ್ನು ಬುಡದಿಂದಲೇ ಕಪ್ಪಾಗಿಸಬಹುದು!
ನಿಮ್ಮ ಕೂದಲನ್ನು ಕೇವಲ 10 ನಿಮಿಷದಲ್ಲಿ ಬುಡದಿಂದಲೇ ಕಪ್ಪುಬಣ್ಣಕ್ಕೆ ತಿರುಗಬೇಕೆಂದರೆ ನಾವಿಂದು ತಿಳಿಸುವ ಈ ವಿಧಾನವನ್ನು ಅನುಸರಿಸಿ.
ಕಾಫಿ ಪುಡಿಯನ್ನು ಬಳಸಿ ಈ ಹೇರ್ ಪ್ಯಾಕ್ ತಯಾರಿಸಬಹುದು. ಇದು ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುವುದಲ್ಲದೆ, ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ.
ಕಾಫಿ ಪುಡಿ - 2 ಟೀಸ್ಪೂನ್, ಹೇರ್ ಕಂಡಿಷನರ್ - 2 ಸ್ಪೂನ್, ನೀರು - 1/2 ಗ್ಲಾಸ್. ಇವು ಬೇಕಾಗಿರುವ ವಸ್ತುಗಳು.
ಒಂದು ಪಾತ್ರೆಯಲ್ಲಿ ಅರ್ಧ ಗ್ಲಾಸ್ ನೀರನ್ನು ಸೇರಿಸಿ. ಅದಕ್ಕೆ ಕಾಫಿ ಪುಡಿಯನ್ನು ಹಾಕಿ, ಕೆಲವು ನಿಮಿಷಗಳ ಕಾಲ ಕುದಿಸಿ. ನಂತರ ಗ್ಯಾಸ್ ಆಫ್ ಮಾಡಿ, ಕಾಫಿಯನ್ನು ತಣ್ಣಗಾಗಲು ಬಿಡಿ. ಈಗ ಒಂದು ಬಟ್ಟಲಿನಲ್ಲಿ ಕೂದಲಿಗೆ ಅಗತ್ಯಕ್ಕೆ ತಕ್ಕಂತೆ ಕಂಡೀಷನರ್ ತೆಗೆದುಕೊಂಡು ಅದಕ್ಕೆ ಕಾಫಿ ಸೇರಿಸಿ.
ಇದೀಗ ನಿಮ್ಮ ಕೂದಲನ್ನು ಶಾಂಪೂ ಮಾಡಿ, ಹೆಚ್ಚುವರಿ ನೀರನ್ನು ಹಿಂಡಿ. ನಂತರ ಕಾಫಿ ಮತ್ತು ಕಂಡೀಷನರ್ ಮಿಶ್ರಣವನ್ನು ಸಂಪೂರ್ಣ ಕೂದಲಿಗೆ ಸಮವಾಗಿ ಹಚ್ಚಿ. ಬಳಿಕ ಕೂದಲನ್ನು ಬನ್’ನಲ್ಲಿ ಕಟ್ಟಿಕೊಳ್ಳಿ. 10ರಿಂದ 20 ನಿಮಿಷಗಳ ನಂತರ, ಕಂಡಿಷನರ್ ಒಣಗಿದಾಗ ನೀರಿನಿಂದ ಚೆನ್ನಾಗಿ ಕೂದಲನ್ನು ತೊಳೆಯಿರಿ.
ಕಾಫಿ ಹೇರ್ ಡೈ ಬಳಸಿದ ಜನರು ಹೇಳುವ ಪ್ರಕಾರ, ಈ ಬಣ್ಣವು ಒಂದು ವಾರವರೆಗೆ ಇರುತ್ತದೆ. ಕಾಫಿ ಹೇರ್ ಡೈ ಕೂದಲಿಗೆ 99% ಸುರಕ್ಷಿತವಾಗಿದೆ. ಏಕೆಂದರೆ ಇದು ನೈಸರ್ಗಿಕವಾಗಿದ್ದು, ಯಾವುದೇ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ. ಆದರೆ ನಿಮಗೆ ಕಾಫಿ ಅಲರ್ಜಿಯಾಗಿದ್ದರೆ, ಬಳಕೆ ಮಾಡಬೇಡಿ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)