ಕಾಫಿ ಪುಡಿಯನ್ನು ಇದರ ಜೊತೆಗೆ ಕಲಿಸಿ ಹಚ್ಚಿ ಸಾಕು.. ಬಿಳಿ ಕೂದಲು ಒಂದು ವಾರದಲ್ಲೇ ಕಪ್ಪಾಗಿ ರೇಷ್ಮೆಯ ನೂಲಿನಂತಾಗುವುದು!
ಬಿಳಿ ಕೂದಲು ಇತ್ತೀಚಿನ ದಿನದಲ್ಲಿ ಸಾಮಾನ್ಯ ಸಮಸ್ಯೆಯಾಗಿ ಬಿಟ್ಟಿದೆ. ಮೊದಲೆಲ್ಲ ವಯಸ್ಸಾದವರಲ್ಲಿ ಕಾಣುತ್ತಿದ್ದ ಈ ಬಿಳಿ ಕೂದಲು ಈಗ ಚಿಕ್ಕ ವಯಸ್ಸಿನವರನ್ನೇ ಹೆಚ್ಚಾಗಿ ಕಾಡುತ್ತಿದೆ.
ಬಿಳಿ ಕೂದಲನ್ನು ಕೆಲವು ಮನೆ ಮದ್ದುಗಳ ಮೂಲಕ ಮನೆಯಲ್ಲೇ ಕಪ್ಪಾಗಿಸಬಹುದು. ಈ ಮನೆಮದ್ದುಗಳಿಂದ ಕೂದಲಿನ ಬೇರುಗಳ ಸಹ ಬಲಗೊಳ್ಳುತ್ತವೆ. ಕೂದಲು ಸೊಂಪಾಗಿ ಬೆಳೆದು ರೇಷ್ಮೆಯಂತಾಗುತ್ತದೆ.
ಕೂದಲಿನ ಆರೋಗ್ಯಕ್ಕೆ ಕಾಫಿ ಪುಡಿ ಸಹ ಉತ್ತಮ ಆಯ್ಕೆ. ಕಾಫಿ ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಬೇಸಿಗೆಯಲ್ಲಿ ಕಾಫಿ ಹೇರ್ ಮಾಸ್ಕ್ ಹಚ್ಚುವುದರಿಂದ ಕೂದಲನ್ನು ಮೃದುಗೊಳಿಸಬಹುದು.
ಮೊಸರು ನೈಸರ್ಗಿಕ ಕಂಡಿಷನರ್ ಆಗಿದ್ದು ಅದು ಕೂದಲನ್ನು ತೇವಗೊಳಿಸಿ ಹೊಳಪು ನೀಡುತ್ತದೆ. ಕಾಫಿಯೊಂದಿಗೆ ಮೊಸರು ಮಿಶ್ರಣ ಮಾಡುವುದರಿಂದ ಕೂದಲು ರೇಷ್ಮೆ ಮತ್ತು ನಯವಾಗಿರುತ್ತದೆ.
ಕಾಫಿ ಮೊಸರು ಹೇರ್ ಮಾಸ್ಕ್ ತಯಾರಿಸಲು ಒಂದು ಕಪ್ ಮೊಸರು, ಒಂದು ಚಮಚ ಕಾಫಿ ಪುಡಿ ಮತ್ತು ನಿಂಬೆ ರಸವನ್ನು ತೆಗೆದುಕೊಳ್ಳಿ.
ಈ ಎಲ್ಲವನ್ನೂ ಮಿಶ್ರಣ ಮಾಡಿ ಮತ್ತು ಪೇಸ್ಟ್ ಮಾಡಿ. ಕೂದಲಿನ ಬೇರುಗಳು ಮತ್ತು ತುದಿಗಳಿಗೆ ಹಚ್ಚಿಕೊಂಡು, 30 ರಿಂದ 40 ನಿಮಿಷಗಳ ಕಾಲ ಬಿಡಿ. ನಂತರ, ಕೆಮಿಕಲ್ ಇಲ್ಲದೇ ಇರುವ ಶಾಂಪೂ ಸಹಾಯದಿಂದ ಕೂದಲನ್ನು ತೊಳೆಯಿರಿ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.