ಒಂಟಿತನ, ಅಬಾರ್ಷನ್.. ಸಾಯಲು ಮಾತ್ರೆ ನುಂಗಿದ್ದೆ, ಆದ್ರೂ ಮಗಳು ಬದುಕಿ ಬಿಟ್ಟಳು!! ಕಾಮಿಡಿ ಕಿಲಾಡಿಗಳು ನಯನಾ ಬಾಳಲ್ಲಿ ಅಂಥದ್ದೇನಾಯ್ತು?

Tue, 19 Mar 2024-3:50 pm,
Comedy Khiladigalu Nayana

Nayana suicide attempt : ತಮ್ಮ ಜೀವನದ ಸೂಪರ್ ಸ್ಟಾರ್ ಮಗಳು ಎಂದು ಹೇಳಿದ್ದಾರೆ. ನನ್ನ ಸಂಪೂರ್ಣ ಬದುಕು ನನ್ನ ಮಗಳಾಗಿದ್ದಾಳೆ. ಅದೊಂದು ಜೀವ ನನ್ನೊಳಗೆ ಇರದೇ ಹೋಗಿದ್ದರೆ ಇವತ್ತಿಗೆ ನಯನಾ ಬದುಕಿರುತ್ತಿರಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

Comedy Khiladigalu Nayana

ನಾನು ಪ್ರೆಗ್ನೆಂಟ್ ಎಂದು ಕನ್ಫರ್ಮ್‌ ಮಾಡಿಕೊಳ್ಳುವ ಎರಡು ಮೂರು ದಿನ ಮುಂಚೆ ಬದುಕಬಾರದು ಸತ್ತು ಹೋಗಬೇಕು ಎಂದು ನಿರ್ಧರಿಸಿದ್ದೆ. ಇದಕ್ಕೂ ಮೊದಲು ನನಗೆ ಎರಡು ಅಬಾರ್ಷನ್ ಆದಾಗ ಏನ್ ಜೀವನ ಗುರು ಎಂದು ಬೇಸರ ಆಗಿತ್ತು.

Comedy Khiladigalu Nayana

ಯಾರಿಗೂ ನನ್ನ ಹೆಣ ಕೂಡ ಸಿಗಬಾರದು ಹಾಗೆ ಸಾಯಬೇಕು ಎಂದು ಕೊಂಡಿದ್ದೆ. ನಾನು ಮತ್ತೆ ಪ್ರೆಗ್ನೆಂಟ್ ಅಂತ ಗೊತ್ತಾಯ್ತು. ಸಾಯಬೇಕು ಅಂತ ಧೈರ್ಯ ಮಾಡಿದ್ದ ಕಾರಣ ಮಾತ್ರೆ ನುಂಗಿದ್ದೆ. ಆದ್ರೆ ಆ ದೇವರು ನನ್ನ ಮಗಳನ್ನು ನನ್ನನ್ನ ಬದುಕಿಸಿ ಬಿಟ್ಟ.

ಆಸ್ಪತ್ರೆಗೆ ಹೋದಾಗ ಡಾಕ್ಟರ್ ನಿಮ್ಮ ಮಗು ಹಾರ್ಟ್‌ ಬೀಟ್ ಕೇಳಿ ಅಂತ ಕೇಳಿಸಿದ್ರು. ನನ್ನ ಮಗು ಉಳಿಸಿಕೊಳ್ಳಬೇಕು ಆ ಜೀವ ಉಳಿಸಿಕೊಳ್ಳಬೇಕು ಅಂತ ನಿರ್ಧಾರ ಮಾಡಿಬಿಟ್ಟೆ. ಎಲ್ಲರನ್ನು ನಗಿಸಬೇಕು ಎಂದು ನಿರ್ಧರಿಸಿದೆ.

ಮಗು ಆಗಿಲ್ಲ ಅಂತ ಸಾಯೋ ನಿರ್ಧಾರ ಮಾಡಿದ್ದಲ್ಲ. ಜೀವನದಲ್ಲಿ  ಒಂಟಿತನ ಕಾಡುತ್ತಿತ್ತು. ಪ್ರೆಗ್ನೆನ್ಸಿ ಸಮಯದಲ್ಲಿ ನನ್ನ ಗಂಡನನ್ನು ನೋಡಬೇಕು ಅನ್ನೋದೇ ತಲೆಯಲ್ಲಿ ಇತ್ತು ಎಂದು ನಯನಾ ತಮ್‌ ನೋವನ್ನು ಹೇಳಿಕೊಂಡಿದ್ದಾರೆ. 

ಶಾಲಿನಿ ಸತ್ಯನಾರಾಯಣ್ ನಡೆಸಿಕೊಡುವ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಕಾಮಿಡಿ ಕ್ವೀನ್ ನಯನಾ ಭಾಗಿಯಾಗಿದ್ದರು, ಈ ವೇಳೆ ತಮ್ಮ ಕೆಟ್ಟ ದಿನಗಳ ಯಾತನೆ ಬಗ್ಗೆ ನಯನಾ ಹಂಚಿಕೊಂಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link