ಬಿಗ್‌ ಬಾಸ್‌ ಮನೆಗೆ ಕಾಮಿಡಿ ಕಿಲಾಡಿಗಳು ನಯನಾ ಎಂಟ್ರಿ !?

Sat, 21 Sep 2024-12:36 pm,

ಕಾಮಿಡಿ ಕಿಲಾಡಿಗಳು ನಯನಾ ಕಿರುತೆರೆ ಮೂಲಕ ಸಾಕಷ್ಟು ಜನಪ್ರಿಯರಾಗಿದ್ದಾರೆ. 

ನಯನಾ ಕಾಮಿಡಿ ಕಿಲಾಡಿಗಳು ಶೋ ಮೂಲಕ ಖ್ಯಾತಿ ಪಡೆದವರು. ಬಳಿಕ ಅನೇಕ ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ಬಿಗ್‌ ಬಾಸ್ ಸೀಸನ್ 11 ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಈಗಾಗಲೇ ಮನೆಗೆ ಎಂಟ್ರಿ ಕೊಡುವ ಸಂಭಾವ್ಯ ಸ್ಪರ್ಧಿಗಳ ಲಿಸ್ಟ್‌ ವೈರಲ್‌ ಆಗಿದೆ.

'ಕಾಮಿಡಿ ಕಿಲಾಡಿಗಳು' ಮೊದಲ ಸೀಸನ್‌ನಲ್ಲಿ ತಮ್ಮ ಅಭಿನಯ, ಕಾಮಿಡಿ ಟೈಮಿಂಗ್‌ ಮೂಲಕ ಜನರ ಮನಸೆಳೆದ ನಯನಾ ಬಿಗ್‌ ಬಾಸ್ ಕನ್ನಡ ಸೀಸನ್‌ 11 ರ ಸ್ಪರ್ಧಿಯಾಗುತ್ತಾರಾ ಎಂಬ ಪ್ರಶ್ನೆ ಮೂಡಿದೆ.

ಕಾಮಿಡಿ ಕಿಲಾಡಿಗಳು ಶೋ ರನ್ನರ್ ಅಪ್ ನಯನಾ ಕೆಲವು ಕನ್ನಡ ಸಿನಿಮಾಗಳಲ್ಲಿ ಸಹ ನಟಿಸಿ ಖ್ಯಾತಿ ಪಡೆಸಿದ್ದಾರೆ. 

ಈ ಹಿಂದೆಯೂ ಬಿಗ್ ಬಾಸ್‌ ಕನ್ನಡ ಸೀಸನ್‌8 ರ ಸಮಯದಲ್ಲಿ ನಯನಾ ಸ್ಪರ್ಧಿಯಾಗಿ ಬರಬಹುದು ಎಂದು ಊಹಿಸಲಾಗಿತ್ತು. ಆದರೆ ಅದು ಸಂಭವಿಸಲಿಲ್ಲ. 

ಸೀತಾರಾಮ ಕಲ್ಯಾಣ ಸಿನಿಮಾ ನಯನಾ ಅವರಿಗೆ ಬೆಳ್ಳಿತೆರೆ ಮೇಲೂ ಖ್ಯಾತಿ ತಂದುಕೊಟ್ಟಿದೆ. ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ ಧಾರಾವಾಹಿಯಲ್ಲೂ ನಯನಾ ನಟಿಸಿ ಗಮನ ಸೆಳೆದಿದ್ದಾರೆ.

ನಯನಾ ಹೊರತಾಗಿ ನಟಿ ಪ್ರೇಮಾ ಸೇರಿದಂತೆ ಅನೇಕ ಜನರ ಹೆಸರು ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿದೆ. 

ಇದು ಊಹಾಪೋಹವಾಗಿದ್ದು, ಬಿಗ್‌ ಬಾಸ್‌ ಆಫರ್ ಬಗ್ಗೆ ನಯನಾ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link