ಇವರೇ ಹಾಸ್ಯ ನಟ ಶರಣ್ ಪತ್ನಿ !ಸಿನಿಮಾರಂಗದಲ್ಲಿ ಈಗಾಗಲೇ ಮಿಂಚಿದ್ದಾರೆ ಇಬ್ಬರೂ ಮಕ್ಕಳು
ಶರಣ್ ಕನ್ನಡದ ಹೆಸರಾಂತ ಹಾಸ್ಯ ನಟ, ನಿರ್ಮಾಪಕ, ಹಿನ್ನೆಲೆ ಗಾಯಕ ಶರಣ್ ನಟಿ ಶೃತಿ ಸಹೋದರ.
ಶರಣ್ ಹಾಸ್ಯ ನಟನಾಗಿ ನಟನಾ ರಂಗಕ್ಕೆ ಕಾಲಿಟ್ಟವರು. ಇಂದು ಕನ್ನಡದ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ.
ಪ್ರೇಮ ಪ್ರೇಮ ಪ್ರೇಮ ಚಿತ್ರದ ಮೂಲಕ ಸಿನಿಮಾ ಜಗತ್ತಿಗೆ ಪರಿಚಯರಾದ ಶರಣ್ ಈಗ ನಟ, ನಿರ್ಮಾಪಕ, ಹಿನ್ನೆಲೆ ಗಾಯಕನಾಗಿ ಹೆಸರು ಮಾಡಿದ್ದಾರೆ.
ಇನ್ನು ಶರಣ್ ಖ್ಯಾತ ನಟಿ ಶೃತಿ ಸಹೋದರ. ಇದರ ಜೊತೆಗೆ ಇವರ ಇಬ್ಬರು ಮಕ್ಕಳು ಕೂಡಾ ಉತ್ತಮ ಕಲಾವಿದರು.
ಶರಣ್ 2002ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಇವರ ಪತ್ನಿ ಪಲ್ಲವಿ ಪತಿಯ ಪ್ರತಿ ಕೆಲಸದಲ್ಲಿಯೂ ಬೆನ್ನೆಲುಬಾಗಿ ನಿಂತಿದ್ದಾರೆ.
ಶರಣ್ ಮತ್ತು ಪಲ್ಲವಿಗೆ ಇಬ್ಬರು ಮಕ್ಕಳು.ಹಿರಿಯ ಮಗನ ಹೆಸರು ಹೃದಯ್, ಕಿರಿಯ ಮಗಳು ಪುಣ್ಯ.
ಶರಣ್ ಮಕ್ಕಳಾದ ಹೃದಯ್ ಮತ್ತು ಪುಣ್ಯ ಇಬ್ಬರೂ ಈಗಾಗಲೇ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಇವರು ಈಗಾಗಲೇ ತಮ್ಮ ನಟನಾ ಕೌಶಲ್ಯ ತೋರಿಸಿದ್ದಾರೆ.
ಮಗಳು ಪುಣ್ಯ ಅವತಾರ ಪುರುಷದಲ್ಲಿ ತಮ್ಮ ಪ್ರತಿಭೆ ತೋರಿಸಿದ್ದರೆ, ಮಗ ಹೃದಯ್ ಗುರು ಶಿಷ್ಯರು ಚಿತ್ರದ ಮೂಲಕ ಹೆಸರು ಮಾಡಿದ್ದಾರೆ.