ಮುಂದಿನ 9 ತಿಂಗಳವರೆಗೆ ಈ ರಾಶಿಯವರಿಗೆ ಸುವರ್ಣಯುಗ !ಬಲಿಷ್ಠ ಗುರು ಬಲದಿಂದ ಒಲಿದು ಬರುವಳು ವಿಜಯಲಕ್ಷ್ಮೀ !ಧನ, ಧಾನ್ಯ, ಸಂಪತ್ತು, ನೆಮ್ಮದಿಗೆ ಇರುವುದೇ ಇಲ್ಲ ಕೊರತೆ !
ಗುರು ಗ್ರಹ ವರ್ಷಕ್ಕೊಮ್ಮೆ ತನ್ನ ಪಥವನ್ನು ಬದಲಾಯಿಸುತ್ತಾನೆ. ಹೀಗಾಗಿ ಗುರುವಿನ ಪರಿಣಾಮ ಜಾತಕದಲ್ಲಿ ಸಂಪೂರ್ಣ ಒಂದು ವರ್ಷದವರೆಗೆ ಇರುವುದು.ಹಾಗೆಯೇ ಕೆಲವು ರಾಶಿ ಜಾತಕದಲ್ಲಿ ಮುಂದಿನ ಅಂದರೆ 2025 ರ ಮೇ ತಿಂಗಳವರೆಗೆ ಗುರು ಬಲ ಗಟ್ಟಿಯಾಗಿರುತ್ತದೆ.
ವೃಷಭ ರಾಶಿ : ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ.ಹೊಸ ಉದ್ಯೋಗಾವಕಾಶ ಒದಗಿ ಬರುವುದು. ಹೊಸ ಕೆಲಸ ಆರಂಭಿಸಬೇಕು ಎಂದಿದ್ದರೆ ಇದೇ ಸರಿಯಾದ ಸಮಯ. ಗುರುಬಲ ಚೆನ್ನಾಗಿ ಇರುವುದರಿಂದ ಕೈ ಹಾಕಿದ ಕೆಲಸ ಕೈ ಹಿಡಿಯುವುದು.
ಸಿಂಹ ರಾಶಿ:ಗುರುವಿನ ನಡೆ ನಿಮ್ಮ ಜೀವನದಲ್ಲಿ ಹಣದ ಹೊಳೆ ಹರಿಸುವುದು.ಜೀವನ ಸಂಗಾತಿಯೊಂದಿಗಿನ ಎಲ್ಲಾ ಸಮಸ್ಯೆಗಳು ಕ್ರಮೇಣ ಅಂತ್ಯಗೊಳ್ಳುತ್ತವೆ.ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ.ಮನೆ ಖರೀದಿಸುವ ಯೋಗವಿದೆ.
ಕನ್ಯಾ ರಾಶಿ: ವೃತ್ತಿಯಲ್ಲಿ ಬಡ್ತಿ ಸಿಗಬಹುದು.ಅನೇಕ ಪ್ರಮುಖ ಕೆಲಸ ಪೂರ್ಣವಾಗುವುದು. ವಿದೇಶ ಪ್ರಯಾಣಕ್ಕೆ ಅವಕಾಶ ಸಿಗಲಿದೆ.ಭೂಮಿ ಖರೀದಿ ಬಗ್ಗೆ ಮುಂದುವರಿಯಬಹುದು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.