ಅಸ್ತವಾಗುತ್ತಿರುವ ಗುರು ನೀಡಲಿದ್ದಾನೆ ಈ ರಾಶಿಯವರಿಗೆ ಭಾರೀ ಸಂಕಷ್ಟ

Fri, 18 Feb 2022-7:43 am,

ಗುರುವಿನ ಅಸ್ತವಾಗುತ್ತಿರುವುದು ವೃಷಭ ರಾಶಿಯವರ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರಲಿದೆ. ಕೆಲಸದಲ್ಲಿ ತೊಂದರೆಗಳು ಎದುರಾಗಲಿದೆ. ಅವರು ಕೆಲಸದ ಸ್ಥಳದಲ್ಲಿ ಅತೃಪ್ತಿ ಇರುತ್ತದೆ. ಸಹೋದ್ಯೋಗಿಗಳೊಂದಿಗಿನ ಸಂಬಂಧ ಹಾಳಾಗಬಹುದು.   ಎಲ್ಲಾ ವಿಚಾರಗಳಲ್ಲಿಯೂ ತಾಳ್ಮೆ ವಹಿಸುವುದು ಬಹಳ ಮುಖ್ಯ. 

ಗುರುಗ್ರಹ ಅಸ್ತವಾಗುತ್ತಿರುವುದರಿಂದ ಕರ್ಕ ರಾಶಿಯವರಿಗೆ ವೃತ್ತಿಯಲ್ಲಿ ಸಮಸ್ಯೆಗಳು ಎದುರಾಗಲಿದೆ. ಅವರ ಶ್ರಮಕ್ಕೆ ತಕ್ಕ ಫಲ ಸಿಗುವುದಿಲ್ಲ. ಸಣ್ಣಪುಟ್ಟ ಕೆಲಸಗಳನ್ನು ಮಾಡುವುದೂ ಕಷ್ಟವಾಗುತ್ತದೆ. 

ಕನ್ಯಾ ರಾಶಿಯವರಿಗೆ, ಈ ಸಮಯವು ಅವರ ವೃತ್ತಿಜೀವನದಲ್ಲಿ ತೊಂದರೆಗಳನ್ನು ತರುತ್ತದೆ. ಕೆಲಸ ಬದಲಾಯಿಸಬೇಕಾಗಬಹುದು. ವ್ಯಾಪಾರಸ್ಥರು ನಷ್ಟ ಅನುಭವಿಸಬಹುದು. ಈ ಸಮಯದಲ್ಲಿ ಬಹಳ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಆತುರದ ನಿರ್ಧಾರ ಆಪತ್ತು ತಂದೊಡ್ಡಬಹುದು. 

ಧನು ರಾಶಿ ಜನರು ತಮ್ಮ ವೃತ್ತಿಜೀವನದಲ್ಲಿ ತೊಂದರೆಗಳನ್ನು ಎದುರಿಸಬಹುದು. ಅವರನ್ನು ವರ್ಗಾವಣೆ ಮಾಡಬಹುದು ಅಥವಾ ಅವರು ಕೆಲಸ ಬದಲಾಯಿಸಬೇಕಾಗಬಹುದು.  ಯೋಚಿಸದೆ ನಿರ್ಧಾರಗಳನ್ನು ತೆಗೆದುಕೊಳ್ಳದಿರುವುದು ಉತ್ತಮ. ತಾಳ್ಮೆಯಿಂದಿರಿ. 

ಮಕರ ರಾಶಿಯ ಜನರು ಈ ಅವಧಿಯಲ್ಲಿ ಕುಟುಂಬದ ವಿಚಾರದಲ್ಲಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿ ಯಾರೊಂದಿಗಾದರೂ ಜಗಳ ಉಂಟಾಗಬಹುದು. ಹಿರಿಯರಿಗೆ ಕಟು ಶಬ್ಧಗಳನ್ನು ಬಳಸದಿರಿ. ವೃತ್ತಿಜೀವನದಲ್ಲಿ ನೀವಂದು ಕೊಂಡ ಯಶಸ್ಸು ಸಿಗುವುದಿಲ್ಲ

ಕುಂಭ ರಾಶಿಯವರು ಕೆಲಸದಲ್ಲಿ ವೈಫಲ್ಯಗಳನ್ನು ಎದುರಿಸಬೇಕಾಗಬಹುದು. ಅನಿರೀಕ್ಷಿತ ಸಮಸ್ಯೆಗಳು ಬರಬಹುದು. ವರ್ಗಾವಣೆ ಆಗಬಹುದು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link