ಇನ್ನು ಐದು ತಿಂಗಳು ನೆಮ್ಮದಿಯ ಬದುಕು ಈ ರಾಶಿಯವರದ್ದು! ಕಷ್ಟ ನಷ್ಟಗಳು ಹತ್ತಿರವೂ ಸುಳಿಯದು
ಸಿಂಹ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಿಂಹ ರಾಶಿ ಜನರಿಗೆ ವಿಶೇಷ ಲಾಭವಾಗುವುದು. ಶನಿಗ್ರಹದ ಹಿಮ್ಮುಖ ಚಲನೆ ಈ ರಾಶಿಯವರ ಮೇಲೆ ಧನಾತ್ಮಕ ಪರಿಣಾಮವನ್ನೇ ಬೀರುವುದು. ಹೆಜ್ಜೆ ಹೆಜ್ಜೆಗೂ ನಿಮಗೆ ಸಿಗುವ ಯಶಸ್ಸನ್ನು ನೋಡಿದರೆ ನಿಮ್ಮ ಜೀವನದ ಮೇಲೆ ಶನಿಯ ಆಶೀರ್ವಾದ ಇದೆ ಎನ್ನುವುದು ನಿಮಗೇ ತಿಳಿಯುತ್ತದೆ. ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ.
ಕನ್ಯಾ ರಾಶಿ: ಶನಿಯ ಹಿಮ್ಮುಖ ಚಲನೆ ಈ ರಾಶಿಯವರ ವೃತ್ತಿ ಬದುಕಿನಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಪರವಾಗಿ ಇರಲಿದೆ. ಉದ್ಯೋಗ, ವ್ಯಾಪಾರ ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಯಶಸ್ಸು ನಿಮ್ಮದಾಗುತ್ತದೆ. ಹಣಕಾಸಿನ ಸಮಸ್ಯೆಗಳು ಬಗೆಹರಿಯಲಿವೆ. ಹೂಡಿಕೆ ಮಾಡುವ ಬಗ್ಗೆ ಯೋಚನೆ ಇದ್ದರೆ ಇದು ಉತ್ತಮ ಸಮಯ.
ತುಲಾ ರಾಶಿ : ಇಲ್ಲಿಯವರೆಗೆ ನಿಮ್ಮನ್ನು ಕಾಡಿದ್ದ ಶನಿದೇವ ಈಗ ನಿಮ್ಮ ಮೇಲೆ ಕೃಪಾ ದೃಷ್ಟಿ ಹರಿಸುತ್ತಾನೆ. ಇಲ್ಲಿಯವರೆಗೆ ಅನುಭವಿಸಿದ್ದ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಹಣದ ಕೊರತೆ ನಿವಾರಣೆಯಾಗುವುದು. ಭವಿಷ್ಯದ ದೃಷ್ಟಿಯಿಂದ ಮಾಡುವ ಹೂಡಿಕೆ ಲಾಭದಾಯಕವಾಗಿರುವುದು.
ಮಕರ ರಾಶಿ: ಈ ಸಮಯವು ಕುಂಭ ರಾಶಿಯವರಿಗೂ ಅನುಕೂಲಕರವಾಗಿದೆ. ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ನಿಮ್ಮದಾಗುವುದು. ವಿದ್ಯಾರ್ಥಿಗಳ ಮೇಲೆ ಶನಿಯ ಕೃಪೆ ಅಧಿಕವಾಗಿರಲಿದೆ. ಆರ್ಥಿಕ ಸ್ಥಿತಿಯೂ ಉತ್ತಮವಾಗಿರುತ್ತದೆ.