ಮುಂದಿನ ಒಂದು ತಿಂಗಳವರೆಗೆ ಈ ರಾಶಿಯವರು ಎಷ್ಟು ಎಚ್ಚರದಿಂದ ಇದ್ದರೂ ಕಡಿಮೆಯೇ!

Mon, 27 Mar 2023-9:00 am,
Gemini

 ಮಿಥುನ ರಾಶಿ : ಗುರುಗ್ರಹ ಅಸ್ತವಾಗುತ್ತಿರುವುದು ಮಿಥುನ ರಾಶಿಯವರ ಕೆಲಸದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದರಲ್ಲೂ ವ್ಯಾಪಾರಸ್ಥರು ಜಾಗರೂಕರಾಗಿರಬೇಕು. ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು. ವೈವಾಹಿಕ ಜೀವನದಲ್ಲೂ ತೊಂದರೆಗಳು ಉಂಟಾಗಬಹುದು. ಚರ್ಚೆಗೆ ಗ್ರಾಸವಾಗದಿರುವುದು ಉತ್ತಮ. 

Virgo

ಕನ್ಯಾ ರಾಶಿ : ಗುರುವಿನ ಅಸ್ತ ಅವಸ್ಥೆಯು ಕನ್ಯಾ ರಾಶಿಯವರಿಗೆ ಬಹಳಷ್ಟು ಹಾನಿಯನ್ನುಂಟುಮಾಡುತ್ತದೆ. ವೈವಾಹಿಕ ಜೀವನದಲ್ಲಿ ಸಮಸ್ಯೆ ಉಂಟಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಎಚ್ಚರಿಕೆಯಿಂದ ಮಾತನಾಡಿ. ಸಮಸ್ಯೆಗಳು ನಿಮ್ಮನ್ನು ಸುತ್ತುವರೆದಿರುತ್ತವೆ.  ಏನೇ ಕೆಲಸ ಮಾಡಬೇಕಿದ್ದರೂ ಏನೇ ಮಾತನಾಡಬೇಕಿದ್ದರೂ ಬಹಳ ಯೋಚಿಸಿ ಮುಂದುವರೆಯಬೇಕು. 

Sagitarius

ಧನು ರಾಶಿ :  ಗುರುವಿನ ಅಸ್ತಮದಿಂದ ಧನು ರಾಶಿಯವರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ತಾಯಿಯ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ. 

ಕುಂಭ ರಾಶಿ : ಗುರುವಿನ ಅಸ್ತ ಅವಸ್ಥೆಯಿಂದ ಕುಂಭ ರಾಶಿಯವರ ಮಾತಿನಲ್ಲಿ ವೇಗ ಕಂಡುಬರುವುದು. ಮಾತಿನಲ್ಲಿ ಸಂಯಮವನ್ನು ಇಟ್ಟುಕೊಳ್ಳುವುದು ಉತ್ತಮ. ಆತ್ಮವಿಶ್ವಾಸದ ಕೊರತೆ ಕಾಡಬಹುದು. ಯಾವುದೇ ಕಾರಣಕ್ಕೂ ಹಣದ ವ್ಯವಹಾರ ಬೇಡವೇ ಬೇಡ.  

ಮೀನ ರಾಶಿ : ಗುರುವು ಮೀನ ರಾಶಿಯಲ್ಲಿಯೇ ಅಸ್ತಮಿಸುತ್ತಿರುವುದರಿಂದ ಇದು ಮೀನ ರಾಶಿಯವರ ಮೇಲೆ ಉತ್ತಮ ಪರಿಣಾಮ ಬೀರುವುದಿಲ್ಲ. ವೃತ್ತಿ ಜೀವನದಲ್ಲಿ ಸಮಸ್ಯೆಗಳು ಬರಬಹುದು. ಆರ್ಥಿಕ ಸ್ಥಿತಿಯೂ ಚೆನ್ನಾಗಿರುವುದಿಲ್ಲ. ಹಣಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link