ಈ ರಾಶಿಯವರಿಗೆ ಧನಿಕರಾಗುವ ಯೋಗ ! ಇನ್ನೆರಡು ವರ್ಷ ಲಕ್ಷ್ಮೀ ಕಟಾಕ್ಷ

Fri, 04 Aug 2023-9:30 am,

ಕೇತು  ತನ್ನ ಸ್ಥಾನವನ್ನು ಬದಲಾಯಿಸುವಾಗ ಅದರ ಪರಿಣಾಮವು ಭೂಮಿಯ ಮೇಲೆ ಮಾತ್ರವಲ್ಲದೆ ಎಲ್ಲಾ 12 ರಾಶಿಯವರ ಜಾತಕದಲ್ಲಿಯೂ ಕಂಡು ಬರುತ್ತದೆ. ಈ ರೀತಿಯಲ್ಲಿ ನೋಡುವುದಾದರೆ ಕೇತು ಸ್ಥಾನ ಬದಲಾವಣೆಯಿಂದ ಮೂರು ರಾಶಿಯವರ ಅದೃಷ್ಟದ ಬಾಗಿಲು ತೆರೆಯುತ್ತದೆ.  

ವೃಷಭ ರಾಶಿ : ಈ ರಾಶಿಯ ಸಂಕ್ರಮಣ ಜಾತಕದ ಐದನೇ ಮನೆಯಲ್ಲಿ ಕೇತು ಕುಳಿತುಕೊಳ್ಳುತ್ತಾನೆ. ಈ ಅವಧಿಯಲ್ಲಿ ಹಠಾತ್ ಆರ್ಥಿಕ ಲಾಭವಾಗುವುದು. ಹಣ ಗಳಿಸುವ ಎಲ್ಲಾ ಪ್ರಯತ್ನಗಳೂ ಫಲಪ್ರದವಾಗುವುದು. ಆರ್ಥಿಕ ಸ್ಥಿತಿ ಉತ್ತಮ ಹಂತಕ್ಕೆ ಬರುವುದು. ಒಂದು ರೀತಿಯಲ್ಲಿ ಎಲ್ಲಾ ಕಷ್ಟಗಳಿಗೆ ಕೇತು ಮುಕ್ತಿ ನೀಡಲಿದ್ದಾನೆ.  

ಸಿಂಹ ರಾಶಿ : ನಿಮ್ಮ ಜಾತಕದ ಎರಡನೇ ಮನೆಯಲ್ಲಿ ಕೇತುವಿನ ಸಂಕ್ರಮಣ ನಡೆಯಲಿದೆ. ಈ ಅವಧಿಯಲ್ಲಿ, ಎಲ್ಲಾ ಮನಸ್ಸಿನ ಸಣ್ಣ ಸಣ್ಣ ಆಸೆಗಳು ಕೂಡಾ ನೆರವೇರುವುದು. ಯಾವುದೇ ಹೊಸ ಕೆಲಸಕ್ಕೆ ಕೈ ಹಾಕಿದರೆ ಶತ ಪ್ರತಿಶತ ಲಾಭವಾಗುವುದು.  ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಚಿಂತಿಸಬೇಕಾಗಿಲ್ಲ. ಕಷ್ಟಗಳು ಕಳೆದು ಸುಖ ಜೀವನ ಆರಂಭವಾಗುವುದು. 

ಧನು ರಾಶಿ : ಉದ್ಯೋಗದಲ್ಲಿ ಉತ್ತಮ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ವೃತ್ತಿಜೀವನದಲ್ಲಿ ಹೊಸ ಎತ್ತರಕ್ಕೆ ಏರುವ ಎಲ್ಲಾ ಸಾಧ್ಯತೆಗಳಿವೆ. ನೀವು ಇಲ್ಲಿಯವರೆಗೆ ಹಂಬಲಿಸುತ್ತಿದ್ದ ಸ್ಥಾನಮಾನ ಈ ಸಂದರ್ಭದಲ್ಲಿ ಪ್ರಾಪ್ತಿಯಾಗುವುದು. ಎಲ್ಲಾ ರೀತಿಯ ಸಾಲಗಳಿಂದ ಮುಕ್ತಿ ಸಿಗುವುದು. ಇನ್ನು ನಿಮ್ಮ ಜೀವನದಲ್ಲಿ ಹಣದ ಕೊರತೆ ಎದುರಾಗುವುದೇ ಇಲ್ಲ. 

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link