ಶೀಘ್ರದಲ್ಲಿಯೇ ಗ್ರಹಗಳ ಸೇನಾಪತಿ, ರಾಜನ ರಾಶಿ ಪರಿವರ್ತನೆ, ಈ ರಾಶಿಗಳ ಜನರ ಭಾಗ್ಯ ವಜ್ರದಂತೆ ಹೊಳೆಯಲಿದೆ!
ವೃಶ್ಚಿಕ ರಾಶಿ-ಸೂರ್ಯ ಮತ್ತು ಮಂಗಳದ ರಾಶಿ ಪರಿವರ್ತನೆ ನಿಮಗೆ ಅತ್ಯಂತ ಪ್ರಯೋಜನಕಾರಿ ಸಾಬೀತಾಗಲಿದೆ. ಏಕೆಂದರೆ ಮಂಗಳನು ನಿಮ್ಮ ಜಾತಕದಲ್ಲಿ ಸಪ್ತಮೇಷನಾಗಿರಲಿದ್ದರೆ, ಸೂರ್ಯ ದೇವರು ಪಂಚಮೇಶನಾಗಿರಲಿದ್ದಾನೆ. ಹೀಗಾಗಿ, ಈ ಅವಧಿಯಲ್ಲಿ ನೀವು ಮಕ್ಕಳ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಅಲ್ಲದೆ, ಸಂಗಾತಿಯೊಂದಿಗೆ ಉತ್ತಮ ಸಂಬಂಧ ಇರುತ್ತದೆ. ಇದೇ ವೇಳೆ, ಪಾರ್ಟ್ನರ್ಶಿಪ್ ಕೆಲಸದಲ್ಲಿ ನೀವು ಉತ್ತಮ ಯಶಸ್ಸನ್ನು ಸಾಧಿಸಬಹುದು. ಈ ಅವಧಿಯಲ್ಲಿ ನೌಕರ ವರ್ಗದವರ ವೇತನ ಹೆಚ್ಚಾಗುವ ಸಾಧ್ಯತೆ ಇದೇ. ಈ ಸಮಯವು ನಿಮ್ಮ ಪಾಲಿಗೆ ಅತ್ಯಂತ ಫಲಪ್ರದವಾಗಿರುತ್ತದೆ. ಅಲ್ಲದೆ, ನೀವು ಪ್ರೇಮ ವ್ಯವಹಾರಗಳಲ್ಲಿ ಯಶಸ್ಸನ್ನು ಪಡೆಯಬಹುದು. ಮತ್ತೊಂದೆಡೆ, ಅವಿವಾಹಿತ ಜನರು ಪ್ರಯತ್ನಪಟ್ಟರೆ ಕಂಕಣ ಭಾಗ್ಯ ಕೂಡಿಬರಲಿದೆ.
ವೃಷಭ ರಾಶಿ-ಮಂಗಳ ಮತ್ತು ಸೂರ್ಯನ ಈ ಸಂಕ್ರಮಣ ನಿಮ್ಮ ಪಾಲಿಗೆ ಮಂಗಳಕರವೆಂದು ಸಾಬೀತಾಗಲಿದೆ. ಏಕೆಂದರೆ ಸೂರ್ಯನು ನಿಮ್ಮ ರಾಶಿಯ ಏಕಾದಶ ಭಾವದಲ್ಲಿ ಮತ್ತು ಮಂಗಳ ನಿಮ್ಮ ಜಾತಕದ ಲಗ್ನ ಭಾವದಲ್ಲಿ ಸಂಚರಿಸಲಿದ್ದಾರೆ.ಹೀಗಾಗಿ ಈ ಸಮಯದಲ್ಲಿ ನಿಮ್ಮ ಆದಾಯದಲ್ಲಿ ಭಾರಿ ಹೆಚ್ಚಳವಾಗಬಹುದು. ಜೊತೆಗೆ ನಿಮ್ಮ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಸಾಧ್ಯತೆ ಇದೆ. ಕೌಟುಂಬಿಕ ಜೀವನ ಸುಧಾರಿಸಲಿದೆ. ಇದರೊಂದಿಗೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಇನ್ನೊಂದೆಡೆ ನಿಮಗೆ ಆದಾಯದ ಹೊಸ ಮೂಲಗಳನ್ನು ರಚನೆಯಾಗಳಿವೆ. ಶೇರ್ ಮಾರ್ಕೆಟ್, ಬೆಟ್ಟಿಂಗ್, ಲಾಟರಿಗಳಲ್ಲಿ ಹೂಡಿಕೆ ಮಾಡುವವರಿಗೆ ಉತ್ತಮ ಲಾಭ ಪ್ರಾಪ್ತಿಯಾಗಲಿದೆ.
ಮಿಥುನ ರಾಶಿ-ಮಂಗಳ ದೇವ ಮತ್ತು ಸೂರ್ಯ ದೇವನ ರಾಶಿ ಪರಿವರ್ತನೆ ವೃಷಭ ರಾಶಿಯ ಜನರಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಏಕೆಂದರೆ ಮಂಗಳ ನಿಮ್ಮ ರಾಶಿಯ ದ್ವಾದಶ ಭಾವದಲ್ಲಿ ಮತ್ತು ಸೂರ್ಯ ನಿಮ್ಮ ಜಾತಕದ ದಶಮ ಭಾವದಲ್ಲಿ ಸಾಗಲಿದ್ದಾರೆ. ಹೀಗಾಗಿ ಈ ಸಮಯದಲ್ಲಿ ನೀವು ಕೆಲಸ-ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಬಹುದು. ಅಲ್ಲದೆ, ಈ ಸಮಯದಲ್ಲಿ ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯಬಹುದು. ಮತ್ತೊಂದೆಡೆ, ಸರ್ಕಾರಿ ಸಂಸ್ಥೆಯೊಂದಿಗೆ ಸಂಬಂಧ ಹೊಂದಿರುವ ಜನರಿಗೆ ಬಡ್ತಿ ಪ್ರಾಪ್ತಿಯಾಗುವ ಸಾಧ್ಯತೆಯಿದೆ. ವೃತ್ತಿಪರವಾಗಿ, ಈ ಅವಧಿಯು ನಿಮಗೆ ತುಂಬಾ ಉತ್ತಮವಾಗಿರಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)