Common Mask Mistakes:ಮಾಸ್ಕ್ ಗೆ ಸಂಬಂಧಿಸಿದ ಈ ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ

Thu, 15 Apr 2021-3:47 pm,

ಮಾಸ್ಕ್ ಗಳನ್ನು ಎಲ್ಲರೂ ಹಾಕುತ್ತಾರೆ. ಆದರೆ, ಮಾಸ್ಕ್ ಗಳನ್ನು ಧರಿಸಲು ಕೂಡಾ ನಿಯಮಗಳಿವೆ. ಹೆಚ್ಚಿನವರು ಮಾಸ್ಕ್ ಧರಿಸುವ ವೇಳೆ ಅನೇಕ ತಪ್ಪುಗಳನ್ನು ಮಾಡುತ್ತಾರೆ.  ಈ ಕಾರಣಕ್ಕಾಗಿಯೇ ಮಾಸ್ಕ್ ಗಳನ್ನು ಹಾಕಿದ್ದರೂ ಅನೇಕರು ಸೋಂಕಿಗೆ ಬಲಿಯಾಗುತ್ತಾರೆ.   ಮಾಸ್ಕ್ ಗಳನ್ನು ಹಾಕುವಾಗ ಮಾಡುವ  ತಪ್ಪುಗಳಿಂದ ಭಾರೀ ಬೆಲೆ ತೆರಬೇಕಾಗುತ್ತದೆ.   

ಇನ್ನು ಕೆಲವರಿಗೆ ಮಾಸ್ಕ್ ಹಾಕಿದ ನಂತರ ಮತ್ತೆ ಮತ್ತೆ ಅದನ್ನು ಮುಟ್ಟಿ ನೋಡುತ್ತಿರುವ ಅಭ್ಯಾಸವಿರುತ್ತದೆ. ಇನ್ನು ಕೆಲವರು ಮಾಸ್ಕ್ ಅನ್ನು ಮೂಗಿನಿಂದ ಕೆಳಗೆ ಸರಿಸಿಕೊಳ್ಳುತ್ತಾರೆ. ಇದು ಬಹು ದೊಡ್ಡ ತಪ್ಪು. ಮಾಸ್ಕ್ ಹೊರಭಾಗದಲ್ಲಿ ಸೋಂಕು ಹರಡುವ ವೈರಸ್‌ಗಳು ಇರಬಹುದು. ಆದ್ದರಿಂದ ಮಾಸ್ಕ್ ಅನ್ನು ಪದೇ ಪದೇ ಮುಟ್ಟುತ್ತಿರಬೇಡಿ. ಬಳಸಿದ ಮಾಸ್ಕ್ ಅನ್ನೇ ಮತ್ತೆ ಮತ್ತೆ ಬಳಸಬೇಡಿ.  

ಇನ್ನು ಕೆಲವರು, ಮಾಸ್ಕ್  ಹಾಕಿರುವಾಗ ಮೂಗಿನಿಂದ ಕೆಳಗೆ ಜಾರಿಸಿ, ಬಾಯಿ ಮಾತ್ರ ಮುಚ್ಚಿಕೊಳ್ಳುವುದನ್ನು ನೀವು ನೋಡಿರಬಹುದು. ಅಮೆರಿಕದ ಸಿಡಿಸಿ (ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್) ಪ್ರಕಾರ, ಮೂಗು, ಬಾಯಿ ಮತ್ತು ಗಲ್ಲವನ್ನು ಮುಚ್ಚುವ ಫೇಸ್ ಮಾಸ್ಕ್ ಅನ್ನು ಧರಿಸಬೇಕು. 

ಪ್ರತಿ ಬಾರಿ ಮಾಸ್ಕ್ ಅನ್ನು ಮುಟ್ಟಿದಾಗಲೂ ಕೈ ತೊಳೆಯಬೇಕು. ಮಾಸ್ಕ್ ಅನ್ನು ಹಾಕುವ ಮೊದಲು ಮತ್ತು ಅದನ್ನು ತೆಗೆದ ನಂತರ, ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆಯಬೇಕು. ಅಥವಾ ಸ್ಯಾನಿಟೈಜರ್ ಹಾಕಬೇಕು. 

ಕೈ ಗಳನ್ನು ತೊಳೆಯುತ್ತಿರುವುದು ಮಾತ್ರ ಮುಖ್ಯವಲ್ಲ, ಮಾಸ್ಕ್ ಗಳನ್ನು ಸ್ವಚ್ಛಗೊಳಿಸುವುದು ಕೂಡಾ ಅಷ್ಟೇ ಮುಖ್ಯ. disposable mask ಅನ್ನು ಧರಿಸಿದರೆ ಅದನ್ನ ಬಳಸಿದ ನಂತರ ಎಸೆದು ಬಿಡಬೇಕು. ಒಂದು ವೇಳೆ ಬಟ್ಟೆಯ ಮಾಸ್ಕ್ ಧರಿಸವುದಾದರೆ ಮಾಸ್ಕ್ ಅನ್ನು ಬಿಸಿ  ನೀರು ಮತ್ತು ಸಾಬೂನಿನಿಂದ ಚೆನ್ನಾಗಿ ಸ್ವಚ್ಛಗೊಳಿಸಬೇಕು.  ನಂತರ ಅದನ್ನು ಬಿಸಿಲಿನಲ್ಲಿ ಒಣಗಿಸಿ. ಮಾಸ್ಕ್ ಅನ್ನು ಒಗೆಯದೆ ಮತ್ತೆ ಮತ್ತೆ ಬಳಸುವ ಕ್ರಮ ಸರಿಯಲ್ಲ. 

ಬೇಸಿಗೆಯಲ್ಲಿ ಹೆಚ್ಚಾಗಿ ಬೆವರಿನಿಂದಾಗಿ ಮಾಸ್ಕ್ ಒದ್ದೆಯಾಗಬಹುದು. ಮಾಸ್ಕ್ ಒದ್ದೆಯಾದರೆ, ಅದನ್ನು ತಕ್ಷಣ ಬದಲಾಯಿಸಿ. ಮಾಸ್ಕ್ ಒದ್ದೆಯಾಗಿದ್ದರೆ ಧರಿಸಿದರೂ ಪ್ರಯೋಜನವಿರುವುದಿಲ್ಲ. ಮಾಸ್ಕ್ ಒದ್ದೆಯಾದರೆ ತಕ್ಷಣ ಬದಲಾಯಿಸಿಬಿಡಿ. ಬಟ್ಟೆಯ ಮಾಸ್ಕ್ ಹಾಕುವುದಾದರೆ 3 ಪದರಗಳ ಮಾಸ್ಕ್ ಅನ್ನು ಹಾಕುವುದು ಬಹಳ ಮುಖ್ಯ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link