ಇನ್ನೊಂದು ವಾರದಲ್ಲಿ ಈ ಕೆಲಸಗಳನ್ನು ಪೂರ್ಣಗೊಳಿಸಿ, ಇಲ್ಲವೇ ಭಾರೀ ನಷ್ಟ
31 ಮಾರ್ಚ್ 2023ರ ಮೊದಲು ತಪ್ಪದೇ ನಿಮ್ಮ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಿ. ವಾಸ್ತವವಾಗಿ, 30 ಸೆಪ್ಟೆಂಬರ್ 2021 ರೊಳಗೆ ಈ ಕೆಲಸವನ್ನು ಪೂರ್ಣಗೊಳಿಸಬೇಕಿತ್ತು. ಬಳಿಕ ಈ ದಿನಾಂಕವನ್ನು 31 ಮಾರ್ಚ್ 2023ರವರೆಗೆ ವಿಸ್ತರಿಸಲಾಗಿದೆ. ನಿಗದಿತ ದಿನಾಂಕದೊಳಗೆ ಈ ಕೆಲಸವನ್ನು ಪೂರ್ಣಗೊಳಿಸದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳಬಹುದು.
ನವೀಕರಿಸಿದ ಐಟಿಆರ್ ಫೈಲ್ ಮಾಡಲು ಮಾರ್ಚ್ 31, 2023ರವರೆಗೆ ಸಮಯವಿದೆ. ಅಷ್ಟರೊಳಗೆ ಮಿಸ್ ಮಾಡದೆ ಐಟಿಆರ್ ಫೈಲ್ ಮಾಡಿ.
ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುವವರು ಮಾರ್ಚ್ 31 ರೊಳಗೆ ಡಿಮ್ಯಾಟ್ ಖಾತೆಯಲ್ಲಿ ನಾಮಿನಿಯ ಹೆಸರನ್ನು ಸೇರಿಸಬೇಕಾಗುತ್ತದೆ. ನಿಗದಿತ ದಿನಾಂಕದೊಳಗೆ ಇದನ್ನು ಮಾಡದಿದ್ದರೆ, ನಿಮ್ಮ ಡಿಮ್ಯಾಟ್ ಖಾತೆಯನ್ನು ಫ್ರೀಜ್ ಮಾಡಲಾಗುತ್ತದೆ.
ನೀವು ಎಲ್‌ಐಸಿಯ ಪಿಎಂ ವಂದನಾ ಯೋಜನೆಯಲ್ಲಿ ಹೂಡಿಕೆ ಮಾಡಲು ಮಾರ್ಚ್ 31, 2023 ರವರೆಗೆ ಕೊನೆಯ ಅವಕಾಶವಿದೆ. ಇದರ ನಂತರ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ.
ನೀವು ಹೆಚ್ಚಿನ ಪ್ರೀಮಿಯಂನೊಂದಿಗೆ ಎಲ್‌ಐಸಿ ಪಾಲಿಸಿಯ ಮೇಲೆ ತೆರಿಗೆ ಕಡಿತದ ಲಾಭವನ್ನು ಪಡೆಯಲು ಬಯಸಿದರೆ, ನಂತರ ಅದನ್ನು ಮಾರ್ಚ್ 31, 2023 ರ ಮೊದಲು ಚಂದಾದಾರರಾಗಿರಬೇಕು.