ಜುಲೈ 31 ರ ಮೊದಲು ಈ ಕೆಲಸವನ್ನು ಪೂರೈಸದಿದ್ದರೆ ಜೇಬಿಗೆ ಕತ್ತರಿ ಗ್ಯಾರಂಟಿ

Fri, 29 Jul 2022-4:16 pm,

ಸರ್ಕಾರ ಬಿಡುಗಡೆ ಮಾಡಿರುವ ಡೆಡ್ ಲೈನ್ ಪ್ರಕಾರ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ಈ ದಿನದೊಳಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸದಿದ್ದರೆ, ದಂಡದ ಜೊತೆಗೆ ಅದನ್ನು ಸಲ್ಲಿಸಬೇಕಾಗುತ್ತದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಸರ್ಕಾರ ಇನ್ನೂ ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡುವುದಿಲ್ಲ ಎನ್ನಲಾಗಿದೆ. ಗಡುವಿನ ನಂತರ ಐಟಿಆರ್ ಸಲ್ಲಿಸುವ ಜನರು 5,000 ರೂಪಾಯಿಗಳನ್ನು ದಂಡವಾಗಿ ಪಾವತಿಸಬೇಕಾಗುತ್ತದೆ.

ಸಿಲಿಂಡರ್ ಅನ್ನು ಅಗ್ಗದ ಬೆಲೆಯಲ್ಲಿ  ಬುಕ್ ಮಾಡಬೇಕಾದರೆ ಜುಲೈ ೩೧ರೊಲಗೆ ಬುಕ್ ಮಾಡಬೇಕು. ಸಿಲಿಂಡರ್‌ಗಳ ಬೆಲೆಗಳನ್ನು ಪ್ರತಿ ತಿಂಗಳ ಮೊದಲ ದಿನದಂದು ನಿಗದಿಪಡಿಸಲಾಗುತ್ತದೆ. ಆಗಸ್ಟ್ 1 ರಂದು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಸಿಲಿಂಡರ್ ದರಗಳನ್ನು ನಿರ್ಧರಿಸಲಿವೆ. ಈ ಬಾರಿ ಕಂಪನಿಗಳು ದರ ಹೆಚ್ಚಿಸಬಹುದು.

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಿದ್ದರೆ, ಜುಲೈ 31 ರ ಮೊದಲು KYC ಮಾಡಿ. ಇದರ ಕೊನೆಯ ದಿನಾಂಕ ಕೂಡ ಜುಲೈ 31 ಆಗಿದೆ. ಇ-ಕೆವೈಸಿ ಮಾಡಲು ಸಾಧ್ಯವಾಗದ ರೈತರು 12ನೇ ಕಂತಿನಿಂದ ವಂಚಿತರಾಗಬೇಕಾಗುತ್ತದೆ.  

 ಸಬ್ಸಿಡಿಯಲ್ಲಿ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಬಯಸಿದರೆ ಗೋವಾ ಸರ್ಕಾರವು ನಿಮಗೆ ಸಬ್ಸಿಡಿಯನ್ನು ನೀಡುತ್ತಿದೆ. ವಾಸ್ತವವಾಗಿ, ಗೋವಾ ಸರ್ಕಾರವು ಜುಲೈ 31 ರವರೆಗೆ ಖರೀದಿಸುವ ಎಲೆಕ್ಟ್ರಿಕ್ ವಾಹನಕ್ಕೆ ಮಾತ್ರ ಸಬ್ಸಿಡಿ ನೀಡುತ್ತದೆ. ದ್ವಿಚಕ್ರ ವಾಹನದಲ್ಲಿ 30,000, ತ್ರಿಚಕ್ರ ವಾಹನದಲ್ಲಿ 60,000 ಮತ್ತು ನಾಲ್ಕು ಚಕ್ರದ ವಾಹನದಲ್ಲಿ 3 ಲಕ್ಷದವರೆಗೆ ಸಬ್ಸಿಡಿ ನೀಡುತ್ತದೆ. ಇದಕ್ಕಾಗಿ ಜುಲೈ 31ರೊಳಗೆ ಎಲೆಕ್ಟ್ರಿಕ್ ವಾಹನ ಖರೀದಿಸಿ ಸಬ್ಸಿಡಿಗೆ ಅರ್ಜಿ ಸಲ್ಲಿಸಬೇಕು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link