ʼಲಡಾಖ್ʼನಲ್ಲಿ ರಾಹುಲ್ ಗಾಂಧಿ ಬೈಕ್ ರೈಡ್..! ಫೋಟೋಸ್ ವೈರಲ್
ರಾಜೀವ್ ಗಾಂಧಿ ಜನ್ಮದಿನದಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೈಕ್ ನಲ್ಲಿ ರಾಹುಲ್ ಲಡಾಕ್ ಪ್ರವಾಸ ಕೈಗೊಂಡಿದ್ದರು.
ರಾಹುಲ್ ಗಾಂಧಿ ಬೈಕ್ ಗೇರ್ ಧರಿಸಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ರಾಹುಲ್ ಪಾಂಗಾಂಗ್ ಸರೋವರದಲ್ಲಿ ತಮ್ಮ ತಂದೆಯ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ.
ಪ್ಯಾಂಗೊಂಗ್ ಸರೋವರವು ವಿಶ್ವದ ಅತ್ಯಂತ ಸುಂದರವಾದ ಸ್ಥಳ ಎಂದು ತಮ್ಮ ತಂದೆ ಹೇಳುತ್ತಿದ್ದರು ಎಂಬ ಶೀರ್ಷಿಕೆಯೊಂದಿಗೆ ಅವರು ಪ್ರವಾಸದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಕೆಟಿಎಂನ 390 ಅಡ್ವೆಂಜರ್ ಬೈಕ್‌ನಲ್ಲಿ ರಾಹುಲ್ ಲಡಾಖ್ ಪ್ರವಾಸ ಕೈಗೊಂಡಿದ್ದಾರೆ.
ಈ ಹಿಂದೆ ರಾಹುಲ್ ಅವರು ಕೆಟಿಎಂ 390 ಬೈಕ್ ಹೊಂದಿರುವುದಾಗಿ ಹೇಳಿದ್ದರು.
KTM ನ ಅಡ್ವೆಂಚರ್ 390 ಆಫ್-ರೋಡ್ ಟ್ರಿಪ್‌ಗಳಿಗೆ ಸೂಕ್ತವಾದ ಬೈಕ್‌ಗಳಲ್ಲಿ ಒಂದು.