ರಾಹುಲ್ ಗಾಂಧಿ ಆಸ್ತಿಯ ಮೌಲ್ಯ ಇಷ್ಟು ಕಡಿಮೆಯೇ.. ಚುನಾವಣಾ ಅಫಿಡವಿಟ್ ನಲ್ಲಿ ಶಾಕಿಂಗ್ ಸತ್ಯ ಬಯಲು!
ರಾಹುಲ್ ಗಾಂಧಿ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ.
ವಯನಾಡು ಕ್ಷೇತ್ರದ ಚುನಾವಣಾಧಿಕಾರಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ರಾಹುಲ್ ಗಾಂಧಿ ತಮ್ಮ ಒಟ್ಟು ಆಸ್ತಿಯ ಮೌಳ್ಯ ತಿಳಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ವಯನಾಡು ಕ್ಷೇತ್ರದಿಂದ ರಾಹುಲ್ ಗಾಂಧಿ ದಾಖಲೆ ಬಹುಮತಗಳಿಂದ ಗೆದ್ದಿದ್ದರು. ಅದೇ ವೇಳೆಗೆ ಅಮೇಠಿಯಲ್ಲಿ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಎದುರು ಸೋಲು ಕಂಡಿದ್ದರು.
ಈ ಬಾರಿ ಅಮೇಠಿ ಬದಲು ವಯನಾಡಿನಿಂದಲೇ ರಾಹುಲ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ.
ರಾಹುಲ್ ಗಾಂಧಿ ತಮ್ಮ ಸಹೋದರಿ ಪ್ರಿಯಾಂಕಾ ವಾದ್ರಾ ಅವರೊಂದಿಗೆ ಬೃಹತ್ ಮೆರವಣಿಗೆ ಮೂಲಕ ತೆರಳಿ ತಮ್ಮ ನಾಮಪತ್ರವನ್ನು ವಯನಾಡ್ ಚುನಾವಣಾಧಿಕಾರಿಗೆ ಸಲ್ಲಿಸಿದರು.
ಈ ಅಫಿಡವಿಟ್ ನಲ್ಲಿ ಕೇವಲ 20 ಕೋಟಿ ಮೌಲ್ಯದ ಆಸ್ತಿಯನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಕೃಷಿ ಭೂಮಿ, ಬ್ಯಾಂಕ್ ಠೇವಣಿ, ಷೇರು ಎಲ್ಲವೂ ಸೇರಿ 20 ಕೋಟಿ ರೂ. ಆಸ್ತಿಯನ್ನು ಹೊಂದಿರುವುದಾಗಿ ರಾಹುಲ್ ಗಾಂಧಿ ಘೋಷಿಸಿದ್ದಾರೆ.