Modimosa ಎಂದು ಹ್ಯಾಷ್ ಟ್ಯಾಗ್ ಬಳಸಿ ಕಾಂಗ್ರೇಸ್ ಟ್ವೀಟ್ ..!
ಪೆಟ್ರೋಲ್, ಡೀಸೆಲ್ ಬೆಲೆ ಕೈ ಸುಡುತ್ತಿವೆ, ಅಡುಗೆ ಅನಿಲದ ಬೆಲೆ ಮೈ ಸುಡುತ್ತಿವೆ! ಅವರೇ, ನಿಮ್ಮ ಅಚ್ಚೇ ದಿನಗಳು ಜನರ ಬದುಕನ್ನು ಭಾರವಾಗಿಸುತ್ತಿವೆ, ಬಿಜೆಪಿ ಈಗಾಗಲೇ ಜನರ ಭವಿಷ್ಯದ ಭರವಸೆ ಕಿತ್ತುಕೊಂಡಿರುವಾಗ "ಬಿಜೆಪಿಯೇ ಭರವಸೆ" ಎನ್ನುವುದು ಜೋಕ್ ಅಲ್ಲದೆ ಇನ್ನೇನು?
#ModiMosa #narendramodi #bsybjp
ಡಬಲ್ ಇಂಜಿನ್ ವೇಗ ಸಿಕ್ಕಿದ್ದು ಅಭಿವೃದ್ಧಿಗಲ್ಲ, ಭ್ರಷ್ಟಾಚಾರಕ್ಕೆ ಮಾತ್ರ! ಕರ್ನಾಟಕದಲ್ಲಿ ಡಬಲ್ ವೇಗದಲ್ಲಿ ಸಾಗುತ್ತಿರುವ 40% ಲೂಟಿಯ ಬಗ್ಗೆ "ನಾ ಖಾವುಂಗಾ ನಾ ಖಾನೆದುಂಗಾ" ಡೈಲಾಗ್ ಖ್ಯಾತಿಯ ಅವರು ತೆಗೆದುಕೊಂಡ ಕ್ರಮಗಳೇನು? ರಾಜ್ಯದಲ್ಲಿನ ಭ್ರಷ್ಟಾಚಾರ, ಹಗರಣಗಳ ಬಗ್ಗೆ ಒಂದೂ ಪದ ಮಾತಾಡದಿರುವುದೇಕೆ?
#ModiMosa #narendramodi #bsybjp
ಅವರೇ, ನೀವು ಹಿಂದೊಮ್ಮೆ ಬೆಂಗಳೂರಿಗೆ ಬಂದಾಗ ಎರಡೇ ದಿನಕ್ಕೆ ಕಿತ್ತುಬಂದ ರಸ್ತೆಯಲ್ಲಿ "ವಿಕಾಸ್" ಕಂಡಿತ್ತು! ಮತ್ತೊಮ್ಮೆ ನೀವು ಹೀಗೆ ಹೋಗಿ ಹಾಗೆ ಬರುವುದರಲ್ಲಿ 'ಮಾಡಾಳ್' ಭ್ರಷ್ಟಾಚಾರ ಹೊರಬಂದಿದೆ. ಭ್ರಷ್ಟಾಚಾರದ ಪರ್ವತವನ್ನೇ ಹೊತ್ತಿರುವ ಪರವಾಗಿ ಮತ ಕೇಳಲು ನಾಚಿಕೆ ಎನಿಸುವುದಿಲ್ಲವೇ?
#ModiMosa #narendramodi #bsybjp
"ಭ್ರಷ್ಟಾಚಾರಕ್ಕೆ ಬಿಜೆಪಿಯೇ ಭರವಸೆ, ಭ್ರಷ್ಟರಿಗೆ ಮೋದಿಯೇ ಭರವಸೆ"! 40% ಕಮಿಷನ್ ಲೂಟಿಯ ಬಗ್ಗೆ ಹಲವು ಪತ್ರಗಳನ್ನು ಬರೆದರೂ ಇತ್ತ ಸುಳಿಯದ ಚುನಾವಣೆಗಾಗಿ ವಾರಕ್ಕೊಮ್ಮೆ ಕರ್ನಾಟಕದಲ್ಲಿ ಚಾಪೆ ಹಾಸಿ ಮಲಾಗುತ್ತಿರುವುದು ಅವರ ಆತ್ಮವಂಚಕತನಕ್ಕೆ ಸಾಕ್ಷಿ. PSI ಹಗರಣದಿಂದ ನೊಂದ ಯುವಕರ ಬಗ್ಗೆ ಮೋದಿ ಮಾತಾಡುವರೇ?
#ModiMosa #narendramodi #bsybjp
ರಾಜ್ಯದಲ್ಲಿ ನೆರೆ ಬಂದಾಗ ಸಿಎಂ ಆಗಿದ್ದ ಅವರು ಪ್ರಧಾನಿ ಕಚೇರಿ ಅಲೆದರೂ ಭೇಟಿಗೆ ಅವಕಾಶ ಕೊಟ್ಟಿರಲಿಲ್ಲ. ತಿಂಗಳುಗಟ್ಟಲೆ ಸಂಪುಟ ರಚನೆಗೆ ಅವಕಾಶ ಕೊಡದೆ ಇಳಿವಯಸ್ಸಿನ BSYರನ್ನು ಗೋಳು ಹೊಯ್ದುಕೊಂಡ ಅವರು ಕಣ್ಣೀರು ಹಾಕಿಸಿ ಅಧಿಕಾರ ಕಿತ್ತುಕೊಂಡಿದ್ದೇಕೆ ಎಂಬ ನಿಗೂಢ ಪ್ರಶ್ನೆಗೆ ಉತ್ತರಿಸುವರೇ?
#ModiMosa #narendramodi #bsybjp
ನೆರೆ ಬಂದಾಗ ಬರಲಿಲ್ಲ,ಬರ ಬಂದಾಗ ಬರಲಿಲ್ಲ, ಕರ್ನಾಟಕಕ್ಕೆ ಆಕ್ಸಿಜನ್ ಕೊಡಲಿಲ್ಲ,ವ್ಯಾಕ್ಸಿನ್ ನೀಡಲಿಲ್ಲ, GST ಪಾಲು ಸಿಗಲಿಲ್ಲ. ಅವರು ಪ್ರಧಾನಿ ಕಚೇರಿಯ ಬಾಗಿಲು ಕಾದರೂ ಭೇಟಿಯಾಗಿರಲಿಲ್ಲ. ಚುನಾವಣೆಗಾಗಿ ಹಲ್ಲು ಕಿಸಿದು, ಕೈಬೀಸಿ ಹೋಗಲು ಬರುವ ಕರ್ನಾಟಕಕ್ಕೆ ಮಾಡಿದ್ದು ಮಹಾ ವಂಚನೆ.
#ModiMosa #narendramodi #bsybjp