ಡಯಾಬಿಟೀಸ್ ರೋಗಿಗಳಿಗೆ ಸಂಜೀವಿನಿ ಹಲಸಿನ ಹಣ್ಣು ! ದಿನಕ್ಕೆ ಇಷ್ಟು ಗ್ರಾಂ ಹಲಸು ಸೇವಿಸಿದರೆ ಮತ್ತೆ ಹತ್ತಿರವೂ ಸುಳಿಯದು ಮಧುಮೇಹ
ಮಧುಮೇಹ ರೋಗಿಗಳು ಮತ್ತು ಮಧುಮೇಹ ಪೂರ್ವದಲ್ಲಿ, ನೀವು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರಗಳಿಂದ ದೂರವಿರಬೇಕು.ಹಾಗಿದ್ದರೆ ಮಧುಮೇಹ ರೋಗಿಗಳಿಗೆ ಸೂಪರ್ ಫುಡ್ ಯಾವುದು ನೋಡೋಣ.
ಹಸಿ ಹಲಸಿನ ಹಣ್ಣಿನ ಗ್ಲೈಸೆಮಿಕ್ ಸೂಚ್ಯಂಕವು ತುಂಬಾ ಕಡಿಮೆಯಾಗಿದೆ ಮತ್ತು ಇದು ಮಧುಮೇಹ ರೋಗಿಗಳಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಹಲಸು ಉತ್ಕರ್ಷಣ ನಿರೋಧಕಗಳು,ವಿಟಮಿನ್ ಎ-ಸಿ,ರೈಬೋಫ್ಲಾವಿನ್, ಮೆಗ್ನೀಸಿಯಮ್,ಪೊಟ್ಯಾಸಿಯಮ್,ತಾಮ್ರ ಮತ್ತು ಮ್ಯಾಂಗನೀಸ್‌ನ ಸಮೃದ್ಧ ಮೂಲವಾಗಿದೆ.
ಹಲಸಿನ ಹಣ್ಣನ್ನು ಸೇವಿಸುವಾಗ,ಅತಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ಹಾನಿಯಾಗಬಹುದು. ಹೀಗಾಗಿ ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.
ನಿಮ್ಮ ದೈನಂದಿನ ಫೈಬರ್ ಅಗತ್ಯವನ್ನು ಪೂರೈಸಲು ಅರ್ಧ ಕಪ್ ಅಥವಾ 75 ಗ್ರಾಂಗಳಷ್ಟು ಹಲಸಿನ ಹಣ್ಣನ್ನು ಸೇವಿಸಬಹುದು .
ಮಾಗಿದ ಹಲಸಿನ ಹಣ್ಣುಗಳಿಗಿಂತ ಹಸಿ ಹಲಸು ಅಂದರೆ ಕಾಯಿ ಮಧುಮೇಹ ರೋಗಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದು ಕಡಿಮೆ ಸಕ್ಕರೆ ಅಂಶವನ್ನು ಹೊಂದಿರುತ್ತದೆ ಮತ್ತು ಕ್ಯಾಲೋರಿ ಅಂಶವು ತುಂಬಾ ಕಡಿಮೆಯಾಗಿದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.