ಮೂಳೆಗಳಲ್ಲಿ ಸಂಗ್ರಹವಾಗಿರುವ ಯೂರಿಕ್ ಆಸಿಡ್ ಹರಳುಗಳನ್ನು ಒಡೆದು ಹಾಕುತ್ತದೆ ಈ ಕಪ್ಪು ಬೀಜ ! ಬೆಳಗ್ಗೆ ಎದ್ದ ತಕ್ಷಣ ಹೀಗೆ ಸೇವಿಸಿ.
ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾದರೆ ಅದನ್ನು ದೇಹದಿಂದ ಹೊರ ಹಾಕುವುದು ಸಾಧ್ಯವಾಗುವುದಿಲ್ಲ.ಆಗ ಯೂರಿಕ್ ಆಸಿಡ್ ಹರಳುಗಳು ಕ್ರಮೇಣ ಕೀಲುಗಳು ಮತ್ತು ಮೂಳೆಗಳ ಸುತ್ತಲೂ ರೂಪುಗೊಳ್ಳಲು ಪ್ರಾರಂಭಿಸುತ್ತವೆ.
ಯೂರಿಕ್ ಆಸಿಡ್ ಹರಳುಗಳನ್ನು ಒಡೆಯಲು ಕರಿ ಜೀರಿಗೆ ಸಹಾಯ ಮಾಡುತ್ತದೆ.ಇದು ಹೈ ಯೂರಿಕ್ ಆಸಿಡ್ ಹೊಂದಿರುವ ರೋಗಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ.ಯೂರಿಕ್ ಆಸಿಡ್ ರೋಗಿಗಳಿಗೆ ಕರಿ ಜೀರಿಗೆ ಹೇಗೆ ಪ್ರಯೋಜನಕಾರಿ ಮತ್ತು ಅದನ್ನು ಹೇಗೆ ಸೇವಿಸಬೇಕು ನೋಡೋಣ.
ಕರಿಜೀರಿಗೆಯಲ್ಲಿ ಹೆಚ್ಚಿನ ಪ್ರಮಾಣದ ಬೀಟಾ-ಸೆಲೆನೈನ್ ಮತ್ತು ಎನ್-ಬ್ಯುಟೈಲ್ಫ್ತಾಲೈಡ್ ಎಂಬ ಸಂಯುಕ್ತಗಳಿವೆ. ಇದು ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದಲ್ಲದೆ,ಈ ಬೀಜಕ್ಕೆ ಮೂಳೆಗಳಲ್ಲಿ ಸಂಗ್ರಹವಾಗಿರುವ ನೈಟ್ರಿಕ್ ಆಕ್ಸೈಡ್ ಹರಳುಗಳ ರಚನೆಯನ್ನು ತಡೆಯುವ ಶಕ್ತಿಯಿದೆ.
ಯೂರಿಕ್ ಆಮ್ಲವನ್ನು ನಿಯಂತ್ರಿಸಲು, ಬೆಳಿಗ್ಗೆ ಕರಿಜೀರಿಗೆಯ ಚಹಾ ಮಾಡಿ ಸೇವಿಸಬಹುದು. ಇದಕ್ಕಾಗಿ,1ಲೋಟ ನೀರು ತೆಗೆದುಕೊಂಡು,ಅದರಲ್ಲಿ ಸುಮಾರು 1 ಚಮಚ ಕರಿಜೀರಿಗೆ ಬೀಜಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ.ನಂತರ, ಅದನ್ನು ಫಿಲ್ಟರ್ ಮಾಡಿ ಚಹಾದಂತೆ ಕುಡಿಯಿರಿ.ಬೇಕಾದರೆ ರುಚಿಗೆ ಜೇನುತುಪ್ಪವನ್ನು ಬೆರೆಸಬಹುದು.
ನೀವು ಸೇವಿಸುವ ಯಾವುದೇ ಆಹಾರಕ್ಕೂ ಕರಿಜೀರಿಗೆ ಪುಡಿಯನ್ನು ಸೇರಿಸಬಹುದು. ಕರಿಜೀರಿಗೆ ಸೇರಿಸಿದ್ದೀರಿ ಎಂದಾದರೆ ಆ ಆಹಾರಕ್ಕೆ ಸ್ವಲ್ಪ ಬೆಲ್ಲ ಸೇರಿಸಿಕೊಳ್ಳಿ. (ಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)